Site icon PowerTV

ಕಳಪೆ ಕಾಮಗಾರಿಗೆ ಕಿತ್ತುಬಿದ್ದ ಅಂಗನವಾಡಿ ಮೇಲ್ಛಾವಣಿ

ಚಿಕ್ಕೋಡಿ: ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಚಿಕ್ಕಮಕ್ಕಳ ಮೇಲೆ ಕಳಚಿ ಬಿದ್ದ ಘಟನೆ ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದಲ್ಲಿ ಸಂಭವಿಸಿದೆ. ರೂಪ್ ನ ಸಿಮೆಂಟ್ ತುಂಡುಗಳು ಮಕ್ಕಳ ಮೇಲೆ ಬಿದ್ದರೂ ಸಹ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ  ಸಂಭವಿಸಿಲ್ಲ.

ನರೇಗಾ ಯೋಜನೆಯಡಿ ಕಳೆದ ವರ್ಷವಷ್ಟೇ ಉದ್ಘಾಟನೆಗೊಂಡಿದ್ದ ಅಂಗನವಾಡಿ ಕಟ್ಟಡವೂ ಸಂಪೂರ್ಣ ಕಳಪೆಮಟ್ಟದ್ದಾಗಿದೆ. ಗ್ರಾಮ ಪಂಚಾಯತಿ ಪಿಡಿಓ ಎ.ಎ.ದಿಲಾವರ್ ವಿರುದ್ದ ಅವ್ಯವಹಾರದ ಆರೋಪವನ್ನು ಮಾಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲು ಸಂಚಾರದ ಟ್ರೈನ್ ಟೈಮಿಂಗ್ಸ್, ಟಿಕೆಟ್​ ದರದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಸುಮಾರು 11.60 ಲಕ್ಷ ರೂಪಾಯಿಗಳಲ್ಲಿ ನಿರ್ಮಾಣಗೊಂಡಿರುವ ಈ ಅಂಗನವಾಡಿ ಕಟ್ಟಡದ ಕಳಪೆ ಕಾಮಕಾರಿ ಒಂದು ವಾರದ ನಂತರ ತಡವಾಗಿ ಬೆಳಕಿಗೆ ಬಂದಿದೆ.

ಈ ಪ್ರಕರಣದ ಕುರಿತು ಘಟನಾ ಸ್ಥಳಕ್ಕೆ ಭೇಟಿನೀಡಿ ರಾಯಬಾಗ ಸಿಡಿಪಿಓ ಘಟನೆಯ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ. ಒಟ್ಟಿನಲ್ಲಿ ಈ ಘಟನೆಯಿಂದ ಪಾರಾದ ಮಕ್ಕಳು ನಿಟ್ಟುಸಿರು ಬಿಡುವಂತಾಗಿದ್ದು ಸಂಬಂಧಪಟ್ಟವರ ವಿರುದ್ದ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Exit mobile version