Site icon PowerTV

ಎಣ್ಣೆ ಹೊಡೆದು ರಾತ್ರಿಯಲ್ಲ ನನಗೆ ಕಾಲ್ ಮಾಡ್ತಿದ್ರು : ಸಿದ್ದರಾಮಯ್ಯ

ಬೆಂಗಳೂರು : ನನಗೆ ಕೆಲವರು ಕುಡಿದುಕೊಂಡು ರಾತ್ರಿಯಲ್ಲ ಕಾಲ್ ಮಾಡ್ತಿದ್ರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 40 ವರ್ಷದಿಂದ ರಾಜಕೀಯ ಜೀವನದಲ್ಲಿದ್ದೀರಾ? ಮೊಬೈಲ್ ಬಳಕೆ ಮಾಡಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದರು.

ನಾನು ಮೊಬೈಲ್ ಬಂದಾಗ 6 ತಿಂಗಳು ಬಳಸಿದ್ದೆ. ರಾತ್ರಿಯಲ್ಲ ಕಾಲ್ ಮಾಡ್ತಿದ್ರು, ಕೆಲವರು ಕುಡಿದುಕೊಂಡು ಕಾಲ್ ಮಾಡ್ತಿದ್ರು. ಆಗ ಮೊಬೈಲ್ ಯೂಸ್ ಮಾಡೋದು ಬಿಟ್ಟೆ. ನಮ್ಮ ಅಧಿಕಾರಿಗಳು, ಪಿಎ ಅವರ ಫೋನ್ ಬಳಕೆ ಮಾಡ್ತಿನಿ ಎಂದು ತಿಳಿಸಿದರು.

ಇದನ್ನೂ ಓದಿ : ರಾಹುಲ್ ಗಾಂಧಿ ಒಬ್ಬ ಅರೆಹುಚ್ಚ : ಮತ್ತೆ ನಾಲಗೆ ಹರಿಬಿಟ್ಟ ಯತ್ನಾಳ್

ಪ್ರೊಟೆಸ್ಟ್ ಮಾಡುವ ನೈತಿಕತೆ ಇಲ್ಲ

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರತಿಭಟನೆ ವಿಚಾರ ಕುರಿತು ಮಾತನಾಡಿ, ಯಡಿಯೂರಪ್ಪರಿಗೆ ಪ್ರತಿಭಟನೆ ಮಾಡುವ ಯಾವುದೇ ನೈತಿಕ ಹಕ್ಕು ಇಲ್ಲ. ಯಡಿಯೂರಪ್ಪ ಸರ್ಕಾರದಲ್ಲಿದ್ದಾಗ ಅವರು ತಮ್ಮ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಿದ್ರಾ? ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಕಾಂಗ್ರೆಸ್ ಬದ್ಧವಾಗಿದೆ ಎಂದು ತಿರುಗೇಟು ನೀಡಿದರು.

ನಮ್ಮ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಜಾರಿ ಮಾಡುತ್ತೇವೆ. ನಾವು ಈಗಾಗಲೇ ಈ ಸಂಬಂಧ ತೀರ್ಮಾನ ಕೈಗೊಂಡಿದ್ದೇವೆ. ಯಡಿಯೂರಪ್ಪ ಅವರ ಪ್ರತಿಭಟನೆ ಕೇವಲ ರಾಜಕೀಯ ಗಿಮಿಕ್ ಆಗಿದೆ ಎಂದು ಸಿದ್ದರಾಮಯ್ಯ ಕುಟುಕಿದರು.

Exit mobile version