Site icon PowerTV

ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ಸಿದ್ದನಾಗಿದ್ದೇನೆ : ಪಾಲಾಕ್ಷಗೌಡ ಪಾಟೀಲ್

ಹಾವೇರಿ : ಸೂರ್ಯ-ಚಂದ್ರ ಇರೋದು ಎಷ್ಟು ಸತ್ಯವೋ, ನಾನು ಬಿಜೆಪಿ ಅಭ್ಯರ್ಥಿ ಆಗೋದು ಅಷ್ಟೇ ಸತ್ಯ ಎಂದು ಹಾವೇರಿ ಬಿಜೆಪಿ ಮುಖಂಡ ಪಾಲಾಕ್ಷಗೌಡ ಪಾಟೀಲ್ ಹೇಳಿದರು.

ಹಾವೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ಸಿದ್ದನಾಗಿದ್ದೇನೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆ ಸ್ಪರ್ಧೆ ನಿಟ್ಟಿನಲ್ಲಿ ಹಲವು ಮಠಾಧೀಶರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ. ಸಂಸದ ಶಿವಕುಮಾರ್ ಉದಾಸಿಯವರು ಸಾಕಷ್ಟು ಕೇಲಸ ಮಾಡಿದ್ದಾರೆ. ಶಿವಕುಮಾರ್ ಉದಾಸಿಯವರ ಜೊತೆ ಮಾತನಾಡಿದ್ದೇನೆ. ನಾನು ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ ಅಂತ ಹೇಳಿದ್ದಾರೆ ಎಂದರು.

ಇದನ್ನೂ ಓದಿ : ಡಿ.ಕೆ ಸುರೇಶ್ ಕನಕಪುರದ ಗಂಡು, ಯಾವುದಕ್ಕೂ ಹೆದರಿ ಕೂರಬಾರದು : ಸಿ.ಟಿ ರವಿ

ಮಗನಿಗೆ ಟಿಕೆಟ್ ಕೇಳಿದ್ದನ್ನ ಸ್ವಾಗತಿಸುವೆ

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪನವರು ಅವರ ಮಗನಿಗೆ ಹಾವೇರಿ ಲೋಕಸಭಾ ಕ್ಷೇತ್ರ ಟಿಕೆಟ್ ಕೇಳಿದ್ದು ತಪ್ಪಲ್ಲ. ಈಶ್ವರಪ್ಪನವರು ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದವರು, ಅವರು ಮಗನಿಗೆ ಟಿಕೆಟ್ ಕೇಳಿದ್ದನ್ನು ಸ್ವಾಗತ ಮಾಡುತ್ತೇನೆ. ಸೂರ್ಯಚಂದ್ರ ಇರೋದು ಎಷ್ಟು ಸತ್ಯವೋ, ನಾನು ಬಿಜೆಪಿ ಅಭ್ಯರ್ಥಿ ಆಗೋದು ಅಷ್ಟೇ ಸತ್ಯ ಎಂದು ಪಾಲಾಕ್ಷಗೌಡ ಪಾಟೀಲ್ ಹೇಳಿದರು.

Exit mobile version