Site icon PowerTV

ಡಿ.ಕೆ ಸುರೇಶ್ ಕನಕಪುರದ ಗಂಡು, ಯಾವುದಕ್ಕೂ ಹೆದರಿ ಕೂರಬಾರದು : ಸಿ.ಟಿ ರವಿ

ಬೆಂಗಳೂರು : ಸಂಸದ ಡಿ.ಕೆ ಸುರೇಶ್ ಕನಕಪುರದ ಗಂಡು, ಅವ್ರು ಯಾವುದಕ್ಕೂ ಹೆದರಿ‌ ಕೂರಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ‌ ರವಿ ಹೇಳಿದರು.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿ.ಕೆ ಸುರೇಶ್ ರಾಜಕೀಯ ನಿವೃತ್ತಿ ನಿರ್ಧಾರ ತೆಗೆದುಕೊಳ್ಳಬಾರದು. ಇಂಥವನ್ನೆಲ್ಲ ಎದುರಿಸಬೇಕು ಅವರು. ಡಿ.ಕೆ ಸುರೇಶ್ ಯಾಕೆ ನಿವೃತ್ತಿ ತಗೊತಾರೆ? ಅವರು ಕನಕಪುರದ ಗಂಡು. ರಾಜಕೀಯ ಎಲ್ಲವನ್ನೂ ತಿಳಿದವರು ಎಂದು ತಿಳಿಸಿದರು.

ಇದನ್ನೂ ಓದಿ : ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ಕೊಟ್ಟ ಸಂಸದ ಡಿ.ಕೆ ಸುರೇಶ್

5 ವರ್ಷ ಸಿದ್ದರಾಮಯ್ಯ ಸಿಎಂ

ಕೆಲವರು ಅಲ್ಲಿ 5 ವರ್ಷ ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಅಂತಿದ್ದಾರೆ. ಇನ್ನೂ ಸ್ವಲ್ಪ ದಿನಗಳಲ್ಲೇ ಆಡಳಿತ ಪಕ್ಷದಲ್ಲೇ, ವಿರೋಧ ಪಕ್ಷವಾಗುತ್ತಾರೆ. ಹಿಂದೆ ಜೆಡಿಎಸ್ ನಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿ ರೆಬೆಲ್ ಆಗಿರಲಿಲ್ಲವಾ? ಹಾಗೆಯೇ, ಕಾಂಗ್ರೆಸ್ ನಲ್ಲೇ ಕೆಲವರು ರೆಬೆಲ್ ಆಗ್ತಾರೆ ಎಂದು ಪರೋಕ್ಷವಾಗಿ ಡಿ.ಕೆ ಶಿವಕುಮಾರ್ ಸಿಎಂ ಸ್ಥಾನ ಸಿಗದೇ ರೆಬೆಲ್ ಆಗಿ ಆಡಳಿತ ಪಕ್ಷದಿಂದ ಹೊರ ಬರಲಿದ್ದಾರೆ ಎಂದು ಟಕ್ಕರ್ ಕೊಟ್ಟರು.

ಡಿ.ಕೆ ಶಿವಕುಮಾರ್ ಬಂದ್ರೆ ನೀವು ಸಿಎಂ ಮಾಡ್ತೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ಅವ್ರು ಕ್ಲಿಯರ್ ಮಾಡಿಕೊಂಡು ಬರಲಿ. ಆ ಮೇಲೆ ನೋಡೋಣ ಎಂದು ಹೇಳಿದರು.

Exit mobile version