Site icon PowerTV

ನೆಹರು ಕಾಲದಿಂದ ಭ್ರಷ್ಟಾಚಾರ ಆರಂಭವಾಗಿದೆ : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ನೆಹರು ಕಾಲದಿಂದ ದೇಶ ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರ ಆರಂಭವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್ ಎಂದು ಕುಟುಕಿದರು.

ಕಾಂಗ್ರೆಸ್ ಭ್ರಷ್ಟಾಚಾರದಿಂದ ತುಂಬಿ ತುಳುಕಿದ್ದ ಪಾರ್ಟಿ. ಕರ್ನಾಟಕ ಎಟಿಎಂ (ATM) ಮಾಡಿಕೊಂಡಿರೋದಕ್ಕೆ ಸಂಕೇತ ಸಿಗತಿದೆ. ಟ್ರಾನ್ಸಫರ್ ಇರಬಹುದು, ಆನ್ ಗೋಯಿಂಗ್ ಕೆಲಸ ನಿಲ್ಲಿಸಿದ್ದಾರೆ. ಕಮೀಷನ್ ಗಾಗಿ ಕೆಲಸ ನಿಲ್ಲಸಿದ್ದಾರೆ. ಬಿಜೆಪಿ ರಾಜ್ಯ ಘಟಕ ಇದನ್ನು ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್ ಬಂದ್ಮೇಲೆ ಬಿಜೆಪಿಯಲ್ಲಿ ಶಿಸ್ತು ಇಲ್ಲ : ಕೆ.ಎಸ್‌ ಈಶ್ವರಪ್ಪ

ಪ್ರತಾಪ್ ಸಿಂಹಗೆ ಸಲಹೆ ಕೊಟ್ಟಿದ್ದೇನೆ

ಹೊಂದಾಣಿಕೆ ರಾಜಕಾರಣದ ಕುರಿತು ಮಾತನಾಡಿ, ಸಂಸದ ಪ್ರತಾಪ್ ಸಿಂಹ ಹೊಂದಾಣಿಕೆ ರಾಜಕಾರಣ ಬಗ್ಗೆ ಮಾತನಾಡಿದ್ದಾರೆ. ನಾನು ಅವರಿಗೆ ಸಲಹೆ ಕೊಟ್ಟಿದ್ದೇನೆ. ಬಹಿರಂಗವಾಗಿ ಮಾತನಾಡದಂತೆ ಹೇಳಿದ್ದೇನೆ. ರಾಜ್ಯಧ್ಯಕ್ಷ, ರಾಷ್ಟ್ರಾಧ್ಯಕ್ಷ ಜೊತೆ ಮಾತನಾಡುವುದಕ್ಕೆ ಹೇಳಿದ್ದೇನೆ. ಅದಕ್ಕೆ ಪ್ರತಾಪ್ ಸಿಂಹ ಒಪ್ಪಿಕೊಂಡಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಸ್ಪಷ್ಟನೆ ನೀಡಿದರು.

ಕೈಬಂದ್ಮೇಲೆ ಕಡೆ, ಕಡೆ ಆಗಿದೆ

ಕಾಂಗ್ರೆಸ್ ನವರು ಬಂದ ಕಾರಣಕ್ಕೆ ಸೋಲಾಗಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿಲ್ಲ. ಅವರು ಬಂದ ಮೇಲೆ ಸ್ವಲ್ಪ ಆ ಕಡೆ, ಈ ಕಡೆ ಆಗಿದೆ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ ಎಂದ ಹೇಳಿದರು.

Exit mobile version