Site icon PowerTV

ಮೀನಿನ ಆಸೆಗಾಗಿ ನೀರುಪಾಲಾದ ಯುವಕ  

ಮುದ್ದೇಬಿಹಾಳ: ಮೀನು ತಿನ್ನುವ ಆಸೆಯಿಂದಾಗಿ ಸ್ನೇಹಿತನ ಜೊತೆ ಕರೆಗೆ ಹೋದಾಗ ಮಗುಚಿ 17 ವರ್ಷದ ಬಾಲಕ ನೀರುಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ತಾರನಾಳ ಕೆರೆಯಲ್ಲಿ ನಡೆದಿದೆ.

ಹೌದು, ಸ್ನೇಹಿತನ ಒತ್ತಾಯದ ಮೇರೆಗೆ ಮಂಜುನಾಥ ಶಿವಪ್ಪ ಚಲವಾದಿ ಮೀನು ಹಿಡಿಯಲು ಹೋಗಿ ಮೃತಪಟ್ಟಿದ್ದಾರೆ.

ಘಟನೆ ನಡೆದಿದ್ದು ಹೇಗೆ..? 

ಯುವಕರಿಬ್ಬರು ಮೀನು ತಿನ್ನುವ ಆಸೆಯಿಂದ ಮನೆಯವರಿಗೆ ತಿಳಿಸದೆ ಕೆರೆಯಲ್ಲಿ ಬಲೆ ಹಾಕಿ ಮೀನು ಹಿಡಿಯಲು ಭಾನುವಾರ ಸಂಜೆ ಕತ್ತಲಾದ ಮೇಲೆ ಹೋಗಿದ್ದರು ಆಗ ತೆಪ್ಪ ಮಗುಚಿ ಯುವಕರು ಮುಳುಗುತ್ತಿದ್ದರು. ಇದನ್ನು ಗಮನಿಸಿದ ವ್ಯಕ್ಕಿಯೊಬ್ಬರು ರಕ್ಷಿಸಿದ್ದರು. ರಕ್ಷಿಸಲ್ಪಟ್ಟ ಯುವಕ ಭೀತಿಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ.

ಇದನ್ನೂ ಓದಿ: ಗೃಹಜ್ಯೋತಿಗೆ 50 ಲಕ್ಷಕ್ಕೂ ಹೆಚ್ಚು ಗ್ರಾಹಕರು ನೋಂದಣಿ

ವಿಷಯ ತಿಳಿದು ರಾತ್ರಿಯೇ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕತ್ತಲೆಯಲ್ಲೇ ಕಾರ್ಯಾಚರಣೆ ನಡೆಸಿದರೂ ಶವ ಪತ್ತೆ ಆಗಿರಲ್ಲ. ಅದ್ರೆ ಸೋಮವಾರ ಬೆಳಿಗ್ಗೆಯೂ ಮತ್ತೇ ಕಾರ್ಯಾಚರಣೆ ಶುರುವಾದರ್ರೂ ಸಲಕರಣೆಗಳ ಕೊರತೆಯಿಂದ ಶವ ಪತ್ತೆ ವಿಳಂಬವಾಗಿತ್ತು. ಗ್ರಾಮದ ಯುವಕರು ಕೆರೆಗಿಳಿದು ಹುಡುಕಾಟ ನಡೆಸಿದಾಗ ಮೀನಿ ಬಲೆಗೆ ಸಿಕ್ಕಿಹಾಕಿಕೊಂಡಿದ್ದ ಶವ ಪತ್ತೆ ಆಗಿದೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version