Site icon PowerTV

ನಟ ಮಾಸ್ಟರ್ ಆನಂದ್‌ಗೆ 18.50 ಲಕ್ಷ ವಂಚನೆ : ದೂರು ದಾಖಲು

ಬೆಂಗಳೂರು: ನಟ, ನಿರ್ಮಾಪಕ, ನಿರ್ದೇಶಕ ಮಾಸ್ಟರ್ ಆನಂದ್‌ಗೆ (Master Anand) 18.50 ಲಕ್ಷ ವಂಚನೆಯಾಗಿದೆ.
ಹೌದು, ಬೆಂಗಳೂರಿನ ಕೊಮ್ಮಘಟ್ಟದ ರಾಮಸಂದ್ರ ಗ್ರಾಮದಲ್ಲಿ ನಿವೇಶನ ನೀಡೋದಾಗಿ ಮಲ್ಟಿ ಲೀಪ್ ವೆಂಚರ್ಸ್ (Multi Leap Ventures )ಹೆಸರಿನ ಕಂಪನಿಯು ಆನಂದ್ ಅವರಿಗೆ 18.50 ಲಕ್ಷ ರೂಪಾಯಿ ವಂಚನೆ  (Fraud) ಮಾಡಿದೆ ಎಂದು ಕಂಪನಿ ವಿರುದ್ದ ಚಂದ್ರಲೇಔಟ್ ಠಾಣೆಯಲ್ಲಿ ಮಾಸ್ಟರ್ ಆನಂದ್ ದೂರು ನೀಡಿದ್ದಾರೆ.
ಮನಿಕಾ ಕೆಂ ಎಂ ಇಂದ ನಿವೇಶನ (Site) ಖರೀದಿಸಲು ಸಾಲ ಸೌಲಭ್ಯ ಇರೋದಾಗಿ ಹೇಳಿದ್ದರಿಂದ ಮಾಸ್ಟರ್ ಆನಂದ್ ಆ ಬಳಿಕ ರಾಮಸಂದ್ರದ 2000 ಅಡಿ ವಿಸ್ತೀರ್ಣದ ನಿವೇಶನ ತೋರಿಸಿದ್ದ ಮಲ್ಟಿ ಲೀಪ್ ವೆಂಚರ್ಸ್ ಕಂಪನಿ ನಿವೇಶನವನ್ನು ಖರೀದಿಸಿದ್ದರು. ಮೊದಲು 70 ಲಕ್ಷ ರೂಪಾಯಿಗೆ ಸೈಟ್ ಖರೀದಿ ಒಪ್ಪಂದವಾಗಿ ಹಂತ ಹಂತವಾಗಿ 18.5 ಲಕ್ಷ ರೂಪಾಯಿ ಮುಂಗಡ ಹಣ ಮಾಸ್ಟರ್ ಆನಂದ ಕಂಪನಿಗೆ ನೀಡಿದ್ದರು.

ಮಾಸ್ಟರ್ ಆನಂದ್ ಹಾಗು ಪತ್ನಿ ಯಶಸ್ವಿನಿ (Yashasvin) ಹೆಸರಲ್ಲಿ ಖರೀದಿ ಖರಾರು ಪತ್ರವನ್ನೂ ಕಂಪನಿ ಮಾಡಿಕೊಟ್ಟಿತ್ತು. ಈ ನಡುವೆ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿತ್ತು ಕಂಪನಿ. ಈ ಬಗ್ಗೆ ವಿಚಾರಿಸಿದಾಗ ಯಾವುದೇ ಸ್ಪಂದನೆ ಸಹ ನೀಡದೆ ಮುಂಗಡ ಹಣ ಸಹ ವಾಪಸ್ ಮಾಡಿರಲಿಲ್ಲ ಎಂದು ವಂಚನೆ ಬಗ್ಗೆ ಚಂದ್ರಲೇಔಟ್ ಠಾಣೆಯಲ್ಲಿ ಮಾಸ್ಟರ್ ಆನಂದ್ ದೂರು ನೀಡಿದ್ದಾರೆ.

 

 

Exit mobile version