Site icon PowerTV

ಟಿವಿ ವಿಚಾರಕ್ಕೆ ಗಲಾಟೆ : ಬಾವಿಗೆ ಹಾರಿದ ಹೆಂಡ್ತಿ ರಕ್ಷಿಸಿಲು ಹೋದ ಗಂಡನೂ ಸಾವು

ಕಾರ್ಕಳ : ಕ್ಷುಲ್ಲಕ‌ ಕಾರಣಕ್ಕಾಗಿ ದಂಪತಿ ಮಧ್ಯೆ ನಡೆದ ಜಗಳ ಸಾವಿನೊಂದಿಗೆ ಅಂತ್ಯ ಕಂಡಿರುವ ಘಟನೆ ಕಾರ್ಕಳ ತಾಲೂಕು ನಲ್ಲೂರಿನಲ್ಲಿ ನಡೆದಿದೆ.

ಯಲ್ಲಾಪುರ ಮೂಲದ ಇಮ್ಯಾನುಲ್ ಸಿದ್ದಿ (40) ಹಾಗೂ ಯಶೋಧಾ (32) ಸಾವನ್ನಪ್ಪಿದ ದುರ್ದೈವಿ ದಂಪತಿ.

ಭಾನುವಾರ ಬೆಳಗ್ಗೆ ಟಿವಿ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗಳ ಮಧ್ಯೆ ಜಗಳವಾಗಿತ್ತು. ಇದೇ ಕಾರಣಕ್ಕೆ‌‌ ಮನನೊಂದು ಯಶೋಧಾ ತೋಟದಲ್ಲಿದ್ದ ಬಾವಿಗೆ ಹಾರಿದ್ದಾಳೆ. ಪತ್ನಿ ಬಾವಿಗೆ ಹಾರಿದನ್ನು ಕಂಡ ಪತಿ ಆಕೆಯನ್ನು ರಕ್ಷಿಸಲು ನೀರಿಗೆ ಹಾರಿದ್ದಾನೆ. ಈಜು ಬಾರದ ಹಿನ್ನಲೆಯಲ್ಲಿ ಇಬ್ಬರು ಮುಳುಗಿ ‌ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : ಅಪಾರ್ಟ್‍ಮೆಂಟ್​ನ 10ನೇ ಮಹಡಿಯಿಂದ ಹಾರಿ ಮಹಿಳೆ ಸಾವು

ಕಳೆದ ಎರಡು ವರ್ಷಗಳಿಂದ ಇಮ್ಯಾನುಲ್, ಯಶೋಧಾ ದಂಪತಿ ನಲ್ಲೂರಿನ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ದಂಪತಿ ಸಾವಿನಿಂದ 10 ವರ್ಷದ ಮಗ ಹಾಗೂ 9 ವರ್ಷದ ಮಗಳು ಅನಾಥರಾಗಿದ್ದಾರೆ.

ಘಟನೆ ಸ್ಥಳಕ್ಕೆ ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿ ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ತೇಜಸ್ವಿ, ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Exit mobile version