Site icon PowerTV

Karnataka Rains : ಕರಾವಳಿ ಭಾಗಗಳಲ್ಲಿ ಮುಂಗಾರು ಚುರುಕು

ಬೆಂಗಳೂರು: ಈಗಲೇ ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು,ಕರಾವಳಿ ಜಿಲ್ಲೆಯಲ್ಲಿ ಮುಂಗಾರು ಮಳೆ ಶನಿವಾರ ತುಸು ವೇಗ ಪಡೆದುಕೊಂಡಿದೆ. ಇದೇ ವೇಳೆ ಜೂ.25ರಂದು ಭಾರತೀಯ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್​​ ಘೋಷಿಸಿದೆ.

ಹೌದು,ಮುಂಗಾರು ಮಾರುತಗಳು ಶನಿವಾರ ರಾಜ್ಯವನ್ನು ಸಂಪೂರ್ಣ ಆವರಿಸಿದ್ದು, ಮುಂದಿನ ಒಂದೆರೆಡು ದಿನಗಳಲ್ಲಿ ಎಲ್ಲಾ ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಕರಾವಳಿಯಲ್ಲಿ ಮುಂದುವರೆದ ವರುಣನ ಅಬ್ಬರ  

ಕರಾವಳಿಯಲ್ಲಿ ಶನಿವಾರ ಇಡೀ ದಿನ ತುಂತುರು, ಹಗುರ ಮಳೆ ಕಾಣಿಸಿದೆ. ಮಂಗಳೂರಿನಲ್ಲಿ ಅಪರಾಹ್ನ ಮಳೆ ಶುರುವಾಗಿದ್ದು, ತುಂತುರು ಮಳೆ ಚಳಿ ಹಿಡಿಸಿದೆ. ದ.ಕ. ಗ್ರಾಮೀಣ ಭಾಗಗಳಲ್ಲೂ ನಿರಂತರ ತುಂತುರು ಮಳೆ ಮುಂದುವರಿದಿದೆ. ಹವಾಮಾನ ಇಲಾಖೆ ಪ್ರಕಾರ ಭಾನುವಾರ ಆರೆಂಜ್‌ ಅಲರ್ಟ್​ ಘೋಷಿಸಿದೆ.

 

 

 

 

 

 

 

 

Exit mobile version