Site icon PowerTV

ಇಂಥ ದುರಹಂಕಾರಕಾಗಿಯೇ ಜನ ನಿಮಗೆ ಮನೆ ದಾರಿ ತೋರಿಸಿದ್ದಾರೆ : ಕಾಂಗ್ರೆಸ್ ತಿರುಗೇಟು

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಬೆಂಗಳೂರಿಗೂ ಏನು ಸಂಬಂಧ? ಎಂದಿರುವ ಮಾಜಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣಗೆ ರಾಜ್ಯ ಕಾಂಗ್ರೆಸ್ ತಿರುಗೇಟು ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಡಿ.ಕೆ ಶಿವಕುಮಾರ್ ಅವರಿಗೂ ಬೆಂಗಳೂರಿಗೂ ಏನು ಸಂಬಂಧ ಎಂದಿರುವ ಅಶ್ವತ್ಥನಾರಾಯಣ ಅವರೇ, ಇಂತಹ ದುರಹಂಕಾರಕಾಗಿಯೇ ರಾಜ್ಯದ ಜನ ನಿಮಗೆ ಮನೆಯ ದಾರಿ ತೋರಿಸಿದ್ದಾರೆ ಎಂದು ಕುಟುಕಿದೆ.

ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಈ ರಾಜ್ಯದ ಸಚಿವರು ಹಾಗೂ ಉಪಮುಖ್ಯಮಂತ್ರಿ. ಬೆಂಗಳೂರು ಅವರ ಕರ್ಮಭೂಮಿ. ಅಶ್ವತ್ಥನಾರಾಯಣ ಅವರೇ, ನಿಮಗೂ ನಮಗೂ ಸಂಬಂಧವಿಲ್ಲ ಅಂತ ರಾಜ್ಯದ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಛೇಡಿಸಿದೆ.

ಇದನ್ನೂ ಓದಿ : ಬೆನ್ನಿಗೆ ಚೂರಿ ಹಾಕಿದವರನ್ನ ಪಕ್ಷದಿಂದ ದೂರ ಇಡಿ : ಶಾಸಕ ಮುನಿರಾಜು

ಏಕವಚನದಲ್ಲಿಯೇ ವಾಗ್ದಾಳಿ

ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಏಕವಚನದಲ್ಲಿಯೇ ನಡೆಸಿದ್ದರು. ನಾನು ರಾಮನಗರ ಜಿಲ್ಲಾ ಉಸ್ತುವಾರಿ ಆದಾಗ, ನಿನಗೂ ರಾಮನಗರಕ್ಕೂ ಏನು ಸಂಬಂಧ ಅಂತ ಡಿಕೆಶಿ ಕೇಳಿದ್ರು. ಈಗ ನಾನು ಕೇಳ್ತೀನಿ, ನಿನಗೂ ಬೆಂಗಳೂರಿಗೂ ಏನಪ್ಪ ಸಂಬಂಧ ಶಿವಕುಮಾರ? ಎಂದು ಗುಡುಗಿದ್ದರು.

ಡಿ.ಕೆ ಶಿವಕುಮಾರ್ ರಿಯಲ್ ಎಸ್ಟೇಟ್ ವ್ಯಾಪಾರಿ. ಡಿಕೆಶಿ ಅಂದ್ರೆ ದ್ವೇಷ, ಡಿಕೆಶಿ ಅಂದ್ರೆ ಅಸೂಯೆ, ಕಿರುಕುಳ. ಡಿ.ಕೆ ಶಿವಕುಮಾರ್ ಅವರದ್ದು ದ್ವೇಷದ ರಾಜಕಾರಣ, ವೇಷದ ರಾಜಕಾರಣ. ಇಂಥವರಿಂದ ಬೆಂಗಳೂರಿಗೆ ಉಪಯೋಗ ಆಗಲ್ಲ ಅಂತ ಕಿಡಿಕಾರಿದ್ದರು.

Exit mobile version