Site icon PowerTV

ನಿಮ್ಮ ಕಾರ್ಯಕರ್ತರು ಎದ್ದಿದ್ದರಿಂದಲೇ ಕಟೀಲ್ ಕಾರು ಅಲ್ಲಾಡಿದ್ದು : ಕಾಂಗ್ರೆಸ್ ಟಕ್ಕರ್

ಬೆಂಗಳೂರು : ಬಿಜೆಪಿ ಕಾರ್ಯಕರ್ತರು ಎದ್ದರೆ ಕಾಂಗ್ರೆಸ್ ಧೂಳಿಪಟವಾಗುತ್ತದೆ ಎಂದು ಮಾಜಿ ಸಚಿವ ಆರ್. ಅಶೋಕ್ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಟಕ್ಕರ್ ಕೊಟ್ಟಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ನಿಮ್ಮ ಕಾರ್ಯಕರ್ತರು ಎದ್ದಿದ್ದರಿಂದಲೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರು ಅಲ್ಲಾಡಿದ್ದು ಎಂದು ಛೇಡಿಸಿದೆ.

ಮುಂದುವರಿದು, ನಿಮ್ಮ ಕಾರ್ಯಕರ್ತರು ಎದ್ದಿದ್ದರಿಂದಲೇ ಆರಗ ಜ್ಞಾನೇಂದ್ರ ಅವರ ಮನೆಗೆ ಕಲ್ಲು ಬಿದ್ದಿದ್ದು. ನಿಮ್ಮ ಕಾರ್ಯಕರ್ತರು ಎದ್ದಿದ್ದರಿಂದಲೇ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟವಾಗಿದ್ದು. ಆರ್. ಅಶೋಕ್ ಅವರೇ, ನಿಮ್ಮ ಕಾರ್ಯಕರ್ತರಿಂದ ಮೊದಲು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎಂದು ಚಾಟಿ ಬೀಸಿದೆ.

ಅಶೋಕ್ ಹೇಳಿದ್ದೇನು?

ಕಾಂಗ್ರೆಸ್ ಉಚಿತ ಗ್ಯಾರಂಟಿ ವಿಚಾರವಾಗಿ ಮಾತನಾಡಿದ್ದ ಮಾಜಿ ಸಚಿವ ಆರ್. ಅಶೋಕ್ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಎದ್ದರೆ ಕಾಂಗ್ರೆಸ್ ಧೂಳಿಪಟವಾಗುತ್ತದೆ ಎಂದಿದ್ದರು.

ಸರಕಾರ ಉಳಿಯಲ್ಲ!

ರಾಜ್ಯದಲ್ಲಿರುವುದು ಸಮ್ಮಿಶ್ರ ಸರಕಾರ ಅಲ್ಲ ಎಂದು ಸಿಎಂ ಹೇಳಿದ್ದಾರೆ. ಆದರೆ, ಇದನ್ನು ಯಾರೂ ಕೇಳಿರಲಲಿಲ್ಲ. ಇದು ಡಿಕೆಶಿಗೆ ಕೊಟ್ಟಿರುವ ಸಂದೇಶ. ಸೂರ್ಯ ಉದಯಿಸಲೇಬೇಕು, ಕಮಲ ಅರಳಲೇಬೇಕು. ಪೋಸ್ಟ್‌ಮಾರ್ಟಮ್‌ ರಿಪೋರ್ಟ್‌ ಎಷ್ಟು ಬಾರಿ ಅಂತ ನೋಡೋದು. ಲೋಕಸಭೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಈ ಸರ್ಕಾರ ಕ್ಷಣ ಮಾತ್ರ ಉಳಿಯಲ್ಲ ಎಂದು ಆರ್. ಅಶೋಕ್ ಹೇಳಿದ್ದರು.

Exit mobile version