Site icon PowerTV

ಪ್ಲಾಸ್ಟಿಕ್ ಡಬ್ಬಿಯನ್ನೇ ನುಂಗಿದ ನಾಗಣ್ಣ, ಹೊರತೆಗೆದ ವೈದ್ಯರು

ಮಂಗಳೂರು: ನಾಗರಹಾವು (Cobra) ನುಂಗಿದ ಪ್ಲಾಸ್ಟಿಕ್ ಡಬ್ಬಿಯನ್ನು ಶಸ್ತ್ರಚಿಕಿತ್ಸೆ ಮೂಲಕ ಮಂಗಳೂರಿನ ಪಶುವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಹೌದು, ಲಿಟಲ್ ಪಾವ್ಸ್‌ನ ಡಾ.ಯಶಸ್ವಿ ನಾರಾವಿ ನೇತೃತ್ವದ ಪಶುವೈದ್ಯರ ತಂಡದಿಂದ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ.

ಹಾವನ್ನು ರಕ್ಷಸಿದ ಕಿರಣ್

ಬಂಟ್ವಾಳದ ಹಾವು ರಕ್ಷಕ ಸ್ನೇಕ್ ಕಿರಣ್ ಅವರು ಬಿಲದಲ್ಲಿ ನಾಗರಹಾವೊಂದನ್ನು ನೋಡಿದ್ದಾರೆ. ಎರಡು ದಿನಗಳಾದರೂ ಸ್ಥಳದಿಂದ ಕದಲದ ಕಾರಣ ಗಾಯಗೊಂಡಿದೆ ಎಂದು ಶಂಕಿಸಿದ ಕಿರಣ್, ಹಾವನ್ನು ಸೆರೆಹಿಡಿದಿದ್ದಾರೆ.

10 ವರ್ಷದ ವಯಸ್ಸಿ ಹಾವು

ಸುಮಾರು 10 ವರ್ಷ ವಯಸ್ಸಿನ ಈ ನಾಗರಹಾವಿನ ದೇಹದ ಮೇಲೆ ಎರಡು ದೊಡ್ಡ ಗಾಯಗಳಿರುವುದನ್ನು ಗಮನಿಸಿ ಚಿಕಿತ್ಸೆಗಾಗಿ ಚಿಕಿತ್ಸಾಲಯಕ್ಕೆ ಕೊಂಡೊಯ್ದಿದ್ದರು.

ಪರೀಕ್ಷೆ ವೇಳೆ ಹಾವಿನ ಹೊಟ್ಟೆಯಲ್ಲಿ ವಸ್ತುವೊಂದು ಇರುವುದು ತಿಳಿದುಬಂದಿದೆ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಸಿದ್ಧತೆಗಳನ್ನು ಮಾಡಲಾಯಿತು. ನಂತರ ಹಾವಿಗೆ ಅರಿವಳಿಕೆ ಮದ್ದು ನೀಡಿ ಜೂನ್ 4 ರಂದು ಶಸ್ತ್ರಚಿಕಿತ್ಸೆ ನಡೆಸಿ ಪ್ಲಾಸ್ಟಿಕ್ ಡಬ್ಬಿಯನ್ನು ಹೊರತೆಗೆಯಲಾಯಿತು.

 

 

Exit mobile version