Site icon PowerTV

ಟೋಲ್ ದರ ಹೆಚ್ಚಳ ವಿರೋಧಿಸಿ ಕನ್ನಡಪರ ಸಂಘಟನೆ ಪ್ರತಿಭಟನೆ

ರಾಮನಗರ: ಬೆಂಗಳೂರು-ಮೈಸೂರು ಹೈವೇ ಟೋಲ್​ ದರ ಹೆಚ್ಚಳ ಖಂಡಿಸಿ ಇಂದು ಕನ್ನಡಪರ ಸಂಘಟನೆಗಳು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ.

ಹೌದು, ಇಂದು ಬೆಳಗ್ಗೆ 10.30ರಿಂದ ಸಂಜೆ 6 ಗಂಟೆಯವರೆಗೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಬೆಂ-ಮೈ ಹೆದ್ದಾರಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ.

ಇದನ್ನೂ ಓದಿ: ಪ್ಲಾಸ್ಟಿಕ್ ಡಬ್ಬಿಯನ್ನೇ ನುಂಗಿದ ನಾಗಣ್ಣ, ಹೊರತೆಗೆದ ವೈದ್ಯರು

ಟೋಲ್‌ ದರ ಇಳಿಸುವಂತೆ ಪ್ರತಿಭಟನಾಕಾರರ ಆಗ್ರಹ

ಕಾರು, ವ್ಯಾನ್‌, ಜೀಪ್‌ ಏಕಮುಖ ಸಂಚಾರಕ್ಕೆ 135 ರಿಂದ 165ಕ್ಕೆ (30 ರೂ.) ಏರಿಕೆಯಾಗಿದ್ದು, ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಸಂಚಾರಕ್ಕೆ 220 ರಿಂದ 270ಕ್ಕೆ (50 ರೂ.) ಏರಿಕೆಯಾಗಿದೆ. ಟ್ರಕ್‌, ಬಸ್, 2 ಆ್ಯಕ್ಸೆಲ್‌ ವಾಹನ ಏಕಮುಖ ಸಂಚಾರಕ್ಕೆ 460 ರಿಂದ 565 ರೂ. (105 ರೂ.) ಹೆಚ್ಚಳ ವಾಗಿದೆ.

3 ಆ್ಯಕ್ಸೆಲ್‌ ವಾಹನಗಳ ಏಕಮುಖ ಸಂಚಾರಕ್ಕೆ 500 ರಿಂದ 615ಕ್ಕೆ ಏರಿಕೆ (115 ರೂ.), ಭಾರಿ ವಾಹನಗಳ ಏಕಮುಖ ಸಂಚಾರಕ್ಕೆ 720 ರಿಂದ 885ಕ್ಕೆ (165 ರೂ.), 7 ಅಥವಾ ಅದಕ್ಕಿಂತ ಹೆಚ್ಚಿನ ಆ್ಯಕ್ಸೆಲ್‌ ವಾಹನಗಳ ಸಂಚಾರಕ್ಕೆ 880 ರಿಂದ 1,080ಕ್ಕೆ (200 ರೂ.) ಹೆಚ್ಚಿಸಲಾಗಿದೆ. ಟೋಲ್​ ದರ ಕಡಿಮೆ ಮಾಡಿ ಎಂದು ಪ್ರತಿಭಟನಾಕಾರರ ಆಗ್ರಹ ಮಾಡಿದ್ದಾರೆ.

 

Exit mobile version