Site icon PowerTV

ಹಾವುಗಳ ಹಾವಳಿಗೆ ಬೇಸತ್ತ ಜನ

ಬೆಂಗಳೂರು:ಈಗಿನ್ನೂ ಮುಂಗಾರು ಮಳೆ(Monsoon) ಆರಂಭವಾಗಿದ್ದು, ಈ ಮಧ್ಯೆ ಸಿಲಿಕಾನ್ ಸಿಟಿಯಲ್ಲಿ ಹಾವುಗಳ ಕಾಟ ಜೋರಾಗಿದೆ(Snakes).

ಹೌದು, ನೀವು ಮನೆಯಿಂದ ಹೊರಡುವುದಕ್ಕೂ ಮುಂಚೆ ಎರಡು‌ ಮೂರು ಬಾರಿ ಕಾರ್, ಬೈಕ್, ಹೆಲ್ಮೆಟ್ ಚೆಕ್ ಮಾಡಲೇ ಬೇಕು.ಇತ್ತೀಚೆಗೆ ಪುಟ್ಟ ಪುಟ್ಟ ಹಾವಿನ ಮರಿಗಳು ಹೆಲ್ಮೆಟ್, ಗಾಡಿಯ ಡಿಕ್ಕಿ, ಶೂಗಳಲ್ಲಿ ಪತ್ತೆಯಾಗುತ್ತಿರುವ ಘಟನೆಗಳು ಹೆಚ್ಚಾಗಿವೆ.

ಇನ್ನು ಬೆಂಗಳೂರಿನಲ್ಲಿ ಹಾವುಗಳ ದಿನದಿಂದ ದಿನಕ್ಕೆ ಕಾಡುತ್ತಲ್ಲೇ ಇದೆ.ಹೀಗಾಗಿ ನಗರದೆಲ್ಲೆಡೆ ಪರಿಸರ ನಾಶವಾಗಿ ಇದೀಗಾ ಎಲ್ಲಿ ನೋಡಿದ್ರು ಬಿಲ್ಡಿಂಗ್ ಗಳಷ್ಟೇ ಕಾಣಿಸುತ್ತಿದೆ. ಸಧ್ಯ ವನ್ಯಜೀವಿಗಳು ವಾಸಿಸಬೇಕಾದ ಜಾಗದಲ್ಲಿ ಮನುಷ್ಯರು ವಾಸವಿರುವುದರಿಂದ ಅವರ ಜಾಗಳಿಗೆ ಅವು ಬರುತ್ತೀವೆ. ನಗರಗಳಲ್ಲಿ ಹಾವುಗಳ ಕಾಟ ಜೋರಾಗಿದೆ.

ಹೌದು, ಇಷ್ಟು ದಿನ ಮಳೆಗಾಲದಲ್ಲಿ ಜನರು ಮನೆಯಿಂದ ಹೊರಗೆ ಹೋಗುವುದಕ್ಕೆ ಚಿಂತಿಸುತ್ತಿದ್ರು‌.‌ ಇದೀಗಾ ಮನೆಗಳಲ್ಲಿ ಇರೋದಕ್ಕೆ ಚಿಂತಿಸುವ ಸ್ಥಿತಿ ಬಂದಿದೆ. ಇದಕ್ಕೆಲ್ಲ ಪ್ರಮುಖ ಕಾರಣ ನಗರದಲ್ಲಿ ಹಾವುಗಳ ಸಂಖ್ಯೆ ಜಾಸ್ತಿಯಾಗಿರೋದು‌.

 

Exit mobile version