Site icon PowerTV

ಕುಮಾರಣ್ಣನನ್ನೂ ಭೇಟಿ ಮಾಡಿ ಸಲಹೆ ಪಡೀತೀನಿ : ಡಿ.ಕೆ ಶಿವಕುಮಾರ್

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ವಿಚಾರ ಕುರಿತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹೌದಪ್ಪ.. ಬಸವರಾಜ ಬೊಮ್ಮಾಯಿ ಎರಡು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರು. ಅವರ ಅನುಭವವನ್ನು ಕೇಳಿ ಮುಂದುವರಿಯಬೇಕು ಎಂದು ಹೇಳಿದ್ದಾರೆ.

ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಎಸ್.ಎಂ ಕೃಷ್ಣ ಸೇರಿ ಹಿರಿಯ ನಾಯಕರನ್ನು ಭೇಟಿ ಮಾಡಿದ್ದೇನೆ. ನಾನು ಕುಮಾರಣ್ಣನನ್ನೂ ಕೂಡ ಭೇಟಿ ಮಾಡಿ ಸಲಹೆ ಪಡೀತೀನಿ. ರಾಜಕಾರಣ ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

ಹೊಟ್ಟೆ ತುಂಬಿದವರು ಹೋರಾಟ ಮಾಡ್ತಿದ್ದಾರೆ

ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿದ್ದಾರೆ. ಗೃಹ ಸಚಿವರು ಭರವಸೆ ಕೊಟ್ಟಿದ್ದಾರೆ. 5 ಕಿಲೋ ಅಕ್ಕಿ ಕೊಟ್ಟಿರುವುದರಲ್ಲಿ ಜೀವನ ಮಾಡ್ತಾ ಇದ್ದಾರೆ. ಬಡವರು, ರೈತರು ಅಕ್ಕಿ ಕೊಟ್ಟಿಲ್ಲ ಎಂದು ಹೋರಾಟ ಮಾಡ್ತಾ  ಇಲ್ಲ. ಹೊಟ್ಟೆ ತುಂಬಿದವರು ಹೋರಾಟ ಮಾಡ್ತಾ ಇದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಇಂದು ಮಾಜಿ ಸಿಎಂ ಭೇಟಿ ಆಗಲಿರುವ ಡಿಸಿಎಂ ಡಿಕೆ ಶಿವಕುಮಾರ್

ಹೆಣ್ಮಕ್ಕಳು ಡೋರ್ ಗಿರು ಕಿತ್ತು ಹಾಕ್ತಿದ್ದಾರೆ

ಹಸಿದವರಿಗೆ ಸರ್ಕಾರ ಸಹಾಯ ಮಾಡುತ್ತದೆ ಎಂಬುದಿದೆ. ತಾಯಿಂದಿರು, ಅಕ್ಕ-ತಂಗಿಯರು ಧರ್ಮಸ್ಥಳ, ಕುಕ್ಕೆ, ಚಾಮುಂಡಿ ಬೆಟ್ಟಕ್ಕೆ ಹೊಗ್ತಾ ಇದ್ದಾರೆ. ಖುಷಿಯಿಂದ ಹೋಗ್ತಾ ಇದ್ದಾರೆ, ಡೋರ್ ಗಿರು ಕಿತ್ತು ಹಾಕುತ್ತಿದ್ದಾರೆ. ಆ ಖುಷಿಯನ್ನು ನೋಡಿ ಸಂತೋಷ ಪಡೋದು ಬಿಟ್ಟು. ಅಕ್ಕಿ ಕೊಟ್ಟಿಲ್ಲ, ಒಂದು ಕಾಳು ಕೊಟ್ಟಿಲ್ಲ ಅಂತ ಪ್ರೊಟೆಸ್ಟ್ ಮಾಡ್ತಾ ಇದಾರೆ ಎಂದು ಕುಟುಕಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಧರಣಿ ಮಾಡುವುದರಲ್ಲಿ ಫೇಮಸ್. ಹಿಂದೆ ಒಬ್ಬರೇ ಧರಣಿ ಕುಳಿತಿದ್ದರು. ಈಗ ಅಸೆಂಬ್ಲಿಗೆ ಬರಲಿ ಬೇಕಾದ್ರೆ ಎಂದು ಬಿಜೆಪಿ ನಾಯಕರಿಗೆ ಡಿ.ಕೆ ಶಿವಕುಮಾರ್ ಟಕ್ಕರ್ ಕೊಟ್ಟಿದ್ದಾರೆ.

Exit mobile version