Site icon PowerTV

ಗೃಹಜ್ಯೋತಿ ಯೋಜನೆಯ ತಾಂತ್ರಿಕ ಸಮಸ್ಯೆ ಬಗೆಹರಿಸಲು ಬೆಸ್ಕಾಂ ಮಾಸ್ಟರ್ ಪ್ಲಾನ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಭಾನುವಾರದಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆದರೆ, ಆರಂಭದಲ್ಲಿಯೇ ವಿಘ್ನ ಎಂಬಂತೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್‌ ಪಡೆಯಲು ಸೇವಾಸಿಂಧು ಪೋರ್ಟಲ್‌ ಸಮಸ್ಯೆ ಹಾಗೂ ಸರ್ವರ್‌ ಸಮಸ್ಯೆಯಿಂದ ಜನರು ಪರದಾಡುವಂತಾಗಿದೆ. ಇದಕೆಲ್ಲಾ ಸಮಸ್ಸೆಗಳಿಗೆ ಪರಿಹಾರ ಒದಗಿಸಲು ಬೆಸ್ಕಾಂ ಮಾಸ್ಟರ್ ಪ್ಲಾನ್ ಒಂದು ರೊಪಿಸಿದೆ.

ಇದನ್ನೂ ಓದಿ: 5ನೇ ದಿನ ಕಳೆದರೂ ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಸರ್ವರ್‌ ಪ್ರಾಬ್ಲಮ್

ಹೌದು, ಹೊಸ ಲಿಂಕ್ ನಲ್ಲಿ ಕಂಡು ಬಂದ ತಾಂತ್ರಿಕ ದೋಷವನ್ನು ಬಗೆಹರಿಸಲಿ ಬೆಸ್ಕಾಂ ಸಪರೇಟ್ ಲಾಗಿನ್ ಐಡಿ ನೀಡಿದ್ದು, ಈ ಲಾಗಿನ್​ಅನ್ನು ಬೆಸ್ಕಾಂ ‌ಸಿಬ್ಬಂದಿಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಬಹುದು. ಈ ಹಿನ್ನೆಲೆಯಿಂದ ಸದ್ಯಕ್ಕೆ ಲಿಂಕ್ ನಲ್ಲಿರುವ ಸಮಸ್ಯೆ ನಿವಾರಣೆಯಾಗಬಹುದು.

ಬೆಂಗಳೂರು ಒನ್,ಕರ್ಣಾಟಕ ಒನ್ ಗಳಿಗೆ ಸದ್ಯಕ್ಕಿಲ್ಲ ಹೊಸ ಲಾಗಿನ್ ಐಡಿ 

ತಾಂತ್ರಿಕ ದೋಷ ನಿವಾರಣಗೆ ಹರಸಾಹಸ, ಸದ್ಯ ಫ್ರೀ ಆಗಿರುವ ಸರ್ವರ್ ಪ್ಲಾನ್ ಎ ಫೇಲ್ ಆದ್ರೆ ಪ್ಲಾನ್ ಬಿ
ಲಾಗಿನ್ ಐಡಿ ಬದಲಾಗಿಯೂ ತಾಂತ್ರಿಕ ದೋಷ ಕಂಡುಬಂದರೆ ಅದಕ್ಕಾಗಿ ಇನ್ನೊಂದು ಪ್ಲಾನ್ ರೆಡಿ ಮಾಡಿಕೊಳ್ಳಲಾಗಿದೆ.

ಜನ ಇನ್ನೂ ಬೆಸ್ಕಾಂ ಕಚೇರಿಗಳಲ್ಲಿ ಸರ್ವರ್ ಡೌನ್ ಇದ್ರೆ ಕಾಯೋ ಹಾಗಿಲ್ಲ

ಅರ್ಜಿ ಸಲ್ಲಿಸಿ ನೋಂದಣಿ ಆಗುವರೆಗೂ ಕಾಯಂಗಿಲ್ಲ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಈ ಪ್ಲಾನ್ ಮಾಡಲಾಗಿದ್ದು, ನಾವು ಇನ್ನೂ
ಅರ್ಜಿ ಸಲ್ಲಿಸಿದ್ರೆ ಸಾಕು ಸರ್ವರ್ ಫ್ರೀ ಆದಾಗ ಬೆಸ್ಕಾಂ ಸಿಬ್ಬಂದಿಗಳೆ ಮುತುವರ್ಜಿ ವಹಿಸಿ ನೋಂದಣಿ ಮಾಡುವಂತೆ ಸೂಚನೆ ನೀಡಿದ್ಧಾರೆ.
ಸರ್ವರ್ ಡೌನ್ ಇದ್ದ ವೇಳೆ ಬರಿ ಅರ್ಜಿ ಸ್ವೀಕಾರಕ್ಕೆ ನಿರ್ಧಾರವಾಗುತ್ತದೆ.

ರಾತ್ರಿ ವೇಳೆ ಹೈ ಸ್ಪೀಡ್ ಆಗಲಿರೋ ಸರ್ವರ್

ರಾತ್ರಿ ವೇಳೆ ಹೈ ಸ್ಪೀಡ್ ಸರ್ವರ್ ವರ್ಕ್​ ಆಗಲಿದ್ದು, ಪೆಂಡಿಂಗ್ ಉಳಿದಿರೋ ಅರ್ಜಿಗಳನ್ನು ರಾತ್ರಿ ವೇಳೆ ನೋಂದಣಿ ಮಾಡಲು ಸೂಚನೆ ನೀಡಿದ್ದಾರೆ.

ಹೊಸ ಲಿಂಕ್ ನಲ್ಲಿ ಓಟಿಪಿ ಜನರೇಟ್ ಸಮಸ್ಯೆಗೆ ಮುಕ್ತಿ

ಓಟಿಪಿ ಬಂದಾಗಲೆಲ್ಲ ಸಂಭಂದ ಪಟ್ಟ ವ್ಯಕ್ತಿ ಗೆ ಕರೆ ಮಾಡಿ ಮಾಹಿತಿಗಳನ್ನು ಸಿಬ್ಬಂದಿಗಳು ಪಡೆಯುತ್ತಾರೆ.ಇದು ನಿನ್ನೆ ಸಂಜೆಯಿಂದಲೇ ಈ ಪ್ರಕ್ರಿಯೆ ಆರಂಭವಾಗಲಿದ್ದು, ಸದ್ಯ ಪಾಸ್ಟ್ ಆಂಡ್ ಪ್ಯೂರೇಸ್ ಆಗಿರುವ ಗೃಹಜ್ಯೋತಿ ಯೋಜನೆ ಲಿಂಕ್ ಓಪನ್​ ಆಗಿ ಸರ್ವಾರ್​ ಸಮಸ್ಸೆಗೆ ಮುಕ್ತಿ ಸಿಗುತ್ತದೆ.

Exit mobile version