Site icon PowerTV

ಯಡಿಯೂರಪ್ಪ ಹೇಳಿದ್ದನ್ನು ಇಷ್ಟು ದಿನ ನಾವು ಕೇಳಿಲ್ವಾ? : ವಿ ಸೋಮಣ್ಣ

ಬೆಂಗಳೂರು : ಮಾಜಿ ಸಚಿವ ವಿ. ಸೋಮಣ್ಣ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನಗೆ ರಾಜ್ಯಾಧ್ಯಕ್ಷ ಸ್ಥಾನ ಯಾಕೆ ಕೊಡಲ್ಲ? ಕೊಡಲೇಬೇಕು ಎಂದು ಪಟ್ಟು ಹಾಕಿದ್ದಾರೆ.

ನಾನು ರಾಜ್ಯಾಧ್ಯಕ್ಷ ಆಗೋದಕ್ಕೆ ಯಡಿಯೂರಪ್ಪನವರು ಒಪ್ಪಿಕೊಳ್ಳಬೇಕು, ಬೇರೆಯವರು ಒಪ್ಪಿಕೊಳ್ಳಬೇಕು. ಯಾಕೆ ನಾವು ಇಷ್ಟು ದಿನ ಯಡಿಯೂರಪ್ಪ ಹೇಳಿದ್ದನ್ನು ಕೇಳಿಲ್ವಾ? ಚುನಾವಣೆ ಮುಗಿದ ನಂತರ ಅವ್ರು ಒಂದು ಫೋನ್ ಕೂಡ ಮಾಡಿಲ್ಲ ನನಗೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ : ಯಡಿಯೂರಪ್ಪ ಅವರಂತಹ ನಾಯಕ ಉಳಿದ ಕಾರಣ ನಾವು ಅಧಿಕಾರಕ್ಕೆ ಬಂದೆವು : ಡಿ.ವಿ ಸದಾನಂದಗೌಡ

ನಾನು ನಾನೇ, ನನ್ನ ಸ್ಟೈಲೇ ಬೇರೆ

ಯಾರು ಯಾರಿಗಿಂತಲೂ ದೊಡ್ಡವರು ಅಲ್ಲ. ಪಾರ್ಟಿ ದೊಡ್ಡದು. ಎಲ್ಲರಿಗೂ ನೀಡಿದ್ದು ಪಾರ್ಟಿಯೇ ಎಂದು ಪರೋಕ್ಷವಾಗಿ ಯಡಿಯೂರಪ್ಪಗೆ ಸೋಮಣ್ಣ ಟಾಂಗ್ ನೀಡಿದ್ದಾರೆ. ನನಗೆ ಅವರ ಮೇಲೆ ಗೌರವ ಇದೆ‌. ಆದರೆ, ನಂದು ನಂದೆ, ಅವರದ್ದು ಅವರದ್ದೇ. ನಾನು ನಾನೇ, ನನ್ನ ಸ್ಟೈಲೇ ಬೇರೆ ಎಂದು ಯಡಿಯೂರಪ್ಪ ಹೆಸರು ಹೇಳದೆ ಟಾಂಗ್ ಕೊಟ್ಟಿದ್ದಾರೆ.

ಇವ್ರ ಕೈಯಲ್ಲಿ ಏನೂ ಕಿಸಿಯೋಕೆ ಆಗಿಲ್ಲ

ರಾಜ್ಯದ ಯಾವ ನಾಯಕರ ಜೊತೆಗೂ ನಾನು ಮಾತನಾಡಿಲ್ಲ. ಇವರ ಕೈಯಲ್ಲಿ ಕಿಸಯದೇ ಇರುವ ಕೆಲಸ ನಾನು ಮಾಡಿದ್ದೇನೆ. ಪ್ರಾಣದ ಹಂಗು ತೊರೆದು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ನನ್ನ ಸರ್ವೀಸ್ ಅನ್ನು ಉಪಯೋಗಿಸಿ, ಆದರೆ ಕಡೆಗಣಿಸಬೇಡಿ. ನಾನು ಸೋತಿರಬಹುದು, ಆದರೆ ನನಗೆ ಕೊಟ್ಟ ಟಾಸ್ಕ್ ನಲ್ಲಿ ಸೋತಿಲ್ಲ, ಗೆದ್ದಿದ್ದೇನೆ. ಸೋಲಿನ ಬಗ್ಗೆ ಯಾರಿಗೆ ತಿಳಿಸಬೇಕೋ ಅವರಿಗೆ ನಾನು ತಿಳಿಸಿದ್ದೇನೆ ಎಂದು ಗುಡುಗಿದ್ದಾರೆ.

Exit mobile version