Site icon PowerTV

ಮೈಸೂರಿನಲ್ಲಿ ಬೌಬೌ ಬಿರಿಯಾನಿ ದಂಧೆ, ರೆಸ್ಟೊರೆಂಟ್ ಸೀಜ್

ಮೈಸೂರು : ರೆಸ್ಟೊರೆಂಟ್ ಆಹಾರ ಪ್ರಿಯರೇ ಎಚ್ಚರ. ನೀವು ಭೇಟಿ ನೀಡುವ ರೆಸ್ಟೊರೆಂಟ್ ನಲ್ಲೂ ತಯಾರಾಗಬಹುದು ಬೌಬೌ ಬಿರಿಯಾನಿ. ಇದಕ್ಕೆ ಸಾಕ್ಷಿ ಎಂಬಂತಿದೆ ಈ ದಂಧೆ.

ಹೌದು, ಮೈಸೂರಿನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಬೌಬೌ ಬಿರಿಯಾನಿ ದಂಧೆ ಬೆಳಕಿಗೆ ಬಂದಿದೆ. ಅರಮನೆ ನಗರಿ ಜನತೆ ಬೆಚ್ಚಿ ಬಿದ್ದಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್ ನಗರದ ಪ್ರಭುಶಂಕರ ಬಿಲ್ಡಿಂಗ್ ನಲ್ಲಿದ್ದ ಗಣೇಶ್ ರೆಸ್ಟೋರೆಂಟ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ನಾಯಿ ಮಾಂಸದ ದಂಧೆ ಪ್ರಕರಣ ಬೆಳಕಿಗೆ ಬಂದಿದೆ.

ದಾಳಿ ವೇಳೆ ರೆಸ್ಟೊರೆಂಟ್ ನಲ್ಲಿ ನಾಯಿ ಮಾಂಸ ಹಾಗೂ ಕೊಳೆತ ಕೋಳಿ ಮಾಂಸ ಪತ್ತೆಯಾಗಿದೆ. ಮಾಂಸವನ್ನು ವಶಪಡಿಸಿಕೊಂಡ ಅಧಿಕಾರಿಗಳು, ರೆಸ್ಟೊರೆಂಟ್ ಗೆ ಬೀಗಮುದ್ರೆ ಜಡಿದಿದ್ದಾರೆ.

ಇನ್ನೂ ಪ್ರತಿಷ್ಠಿತ ಹೋಟೆಲ್‌ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ಕೊಳೆತ ಮಾಂಸ, ಕಲ್ಲುಗಟ್ಟಿದ ಮೀನು, ಮಸಾಲೆ ಸಮೇತ ಬೂಸ್ಟ್‌ ಹಿಡಿದ ನಾನ್‌ವೆಜ್‌ ನೋಡಿ ಶಾಕ್ ಆಗಿದ್ದಾರೆ. ಮಾಲೀಕರಿಗೆ ದಂಡ ವಿಧಿಸಿ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ತಹಸೀಲ್ದಾರ್‌ ಸಂತೋಷ್‌ ಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಂದ್ರಪ್ಪ, ಪುರಸಭೆ ಆರೋಗ್ಯಾಧಿಕಾರಿಗಳು ಇದ್ದರು.

Exit mobile version