Site icon PowerTV

ಕಾಂಗ್ರೆಸ್ ಶಾಸಕನಿಗೆ ಆಲಿಂಗಿಸಿದ ಬಿಜೆಪಿ ಸಂಸದ ಅನಂತಕುಮಾರ್

ಕಾರವಾರ : ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರು ಕಾಂಗ್ರೆಸ್ ನ ನೂತನ ಶಾಸಕ ಸತೀಶ ಸೈಲ್ ಅವರನ್ನು ಆಲಂಗಿಸಿ ಅಭಿನಂದಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಗೆ ಆಗಮಿಸಿದ ವೇಳೆ ಮುಖಾಮುಖಿಯಾದ ಇಬ್ಬರೂ ನಾಯಕರು ಆತ್ಮೀಯವಾಗಿ ಮಾತನಾಡಿದ್ದಾರೆ.

ಶಾಸಕ ಸತೀಶ ಸೈಲ್ ಅವರು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ. ಇಬ್ಬರ ಸಮ್ಮಿಲನ ಅನೇಕರಲ್ಲಿ ಅಚ್ಚರಿ ಹುಟ್ಟಿಸಿದ್ದು, ಕಳೆದ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದಕ್ಕೆ ಈ ಅಪ್ಪುಗೆಯಾ? ಎನ್ನುವ ಪ್ರಶ್ನೆಯೂ ಅನೇಕರನ್ನು ಕಾಡಲಾರಂಭಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಕನ್ನಡ ಜಿಲ್ಲೆಗೆ ಬಂದು ಪ್ರಚಾರ ಮಾಡಿದರು. ಆದ್ರೆ, ಸಂಸದ ಹೆಗಡೆ ಮಾತ್ರ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಎಲ್ಲಿಯೂ ಪ್ರಚಾರಕ್ಕೆ ಹೋಗಿರಲಿಲ್ಲ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಭ್ಯರ್ಥಿಗಳ ಆಯ್ಕೆ ಮಾಡಿದ್ದಕ್ಕಾಗಿ ಸಂಸದ ಹೆಗಡೆ ಅವರಿಗೆ ಅನೇಕ ಅಭ್ಯರ್ಥಿಗಳು ಸೋಲಬೇಕಿತ್ತು. ಅದರಲ್ಲಿ ಕಾರವಾರದ ರೂಪಾಲಿ ಕೂಡ ಒಬ್ಬರು. ಹಾಗಾಗಿಯೇ ಸಂಸದರು ರೂಪಾಲಿ ವಿರುದ್ಧ ಗೆದ್ದ ಸೈಲ್ ಅವರನ್ನು ಬಿಗಿದಪ್ಪಿಕೊಂಡಿರುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ.

Exit mobile version