Site icon PowerTV

ಪರಿಷತ್ಗೆ ನಾಮ ನಿರ್ದೇಶನ : ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದ ಕಾಂಗ್ರೆಸ್, ಉಮಾಶ್ರೀಗೆ ನಿರಾಸೆ

ಬೆಂಗಳೂರು: ವಿಧಾನ ಪರಿಷತ್​ಗೆ ನಾಮ ನಿರ್ದೇಶನಗೊಳ್ಳುವ ಮೂವರು ನಾಯಕರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ.

ಹೌದು, ಶಿಕ್ಷಣತಜ್ಞರಾದ ಮನ್ಸೂರ್ ಅಲಿ ಖಾನ್ ಮತ್ತು ಎಂಆರ್ ಸೀತಾರಾಮ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಎಂ.ಆರ್.ಸೀತಾರಾಂ ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ರೆ, ಮನ್ಸೂರ್ ಖಾನ್ ಡಿಸಿಎಂ ‌ಡಿ.ಕೆ‌.ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಹಿರಿತನದ ಆಧಾರದ ಮೇಲೆ ಇವರಿಬ್ಬರ ಹೆಸರನ್ನು ಫೈನಲ್​​ ಮಾಡಲಾಗಿದೆ.

ಇದನ್ನೂ ಓದಿ : 5ನೇ ದಿನ ಕಳೆದರೂ ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಸರ್ವರ್‌ ಪ್ರಾಬ್ಲಮ್

ನಾಮನಿರ್ದೇಶಿತ ಸದಸ್ಯರುಗಳೊಂದಿಗೆ , ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಮೂರು ಸ್ಥಾನಗಳ ಚುನಾವಣೆಯಲ್ಲಿ  . ಮಾಜಿ ಮುಖ್ಯಮಂತ್ರಿ  ಜಗದೀಶ್ ಶೆಟ್ಟರ್, ಸಚಿವ ಬೋಸ ರಾಜು ಮತ್ತು ಕಾಮಕನೂರ್ ತಿಪ್ಪನಪ್ಪ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ. ಪ್ರತಿಪಕ್ಷಗಳಿಂದ ಯಾರನ್ನೂ ಕಣಕ್ಕೆ ಇಳಿಸಿಲ್ಲವಾದ ಕಾರಣ, ಈ ಮೂವರೂ ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳಿವೆ. ಇನ್ನು ಎಂಎಲ್​​ಸಿ ಸ್ಥಾನಕ್ಕೆ ತೀವ್ರ ಆಕಾಂಕ್ಷಿಗಳಾಗಿದ್ದ ಮಾಜಿ ಸಚಿವೆ ಉಮಾಶ್ರೀ, ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾಗೆ  ಭಾರಿ ನಿರಾಸೆಯಾಗಿದೆ.

Exit mobile version