Site icon PowerTV

ಒಂದೇ ನಿಮಿಷದಲ್ಲಿ ಗೃಹಜ್ಯೋತಿ ಅರ್ಜಿ ನೋಂದಣಿ!

ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿಗೆ ಬಿಗ್ ರಿಲೀಫ್.

ಹೌದು, ಗೃಹಜ್ಯೋತಿ ಅರ್ಜಿ ನೋಂದಣಿ ವಿಳಂಬಕ್ಕೆ ಕೊನೆಗೂ ಪರಿಹಾರ ಸಿಕ್ಕಿದ್ದು, ಸರ್ವರ್ ಸಮಸ್ಯೆಗೆ ರಾಜ್ಯ ಸರ್ಕಾರ ಹೊಸ ಲಿಂಕ್ ಬಿಟ್ಟಿದೆ.

ಗೃಹ ಜ್ಯೋತಿ ಅರ್ಹ ಫಲನುಭವಿಗಳು ಅರ್ಜಿ ನೋಂದಾಣಿ ಮಾಡಲು ಕಳೆದ ಹಲವು ದಿನಗಳಿಂದ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದನ್ನು ಮನಗಂಡ ಸಿದ್ದರಾಮಯ್ಯ ಸರ್ಕಾರ ಕೊನೆಗೂ ಸರ್ವರ್ ಶಾಕ್ ಗೆ ಮುಕ್ತಿ ನೀಡಿದೆ.

ಸೇವಾ ಸಿಂಧು ಹಾಗೂ ಬೆಂಗಳೂರು ಒನ್ ಸೆಂಟರ್ ನಲ್ಲಿ ಸರ್ವರ್ ಡೌನ್ ನಿಂದಾಗಿ ದಿನಗಟ್ಟಲೇ ಕಾಯುತ್ತಿದ್ದ ಜನರ ಸಮಸ್ಯೆಗೆ ಹೊಸ ಲಿಂಕ್ ಬಿಟ್ಟು ಪರಿಹಾರ ಕಂಡುಕೊಂಡು ಅರ್ಜಿ ನೋಂದಾಣಿ ಕಾರ್ಯವನ್ನು ಸುಲಭಗೊಳಿಸಿದೆ. ಇದ್ದರಿಂದ ಕೇವಲ ಒಂದೇ ನಿಮಿಷದಲ್ಲಿ ಈಗ ಗೃಹಜ್ಯೋತಿ ನೋಂದಣಿವನ್ನು ಮಾಡಿಕೊಳ್ಳಬಹುದಾಗಿದೆ.

Exit mobile version