Site icon PowerTV

ಎಣ್ಣೆ ಏಟಲ್ಲಿ ಕಿರಿಕ್ : ಕಿರುತೆರೆ ನಟನ ಮೇಲೆ ಎಫ್ಐಆರ್ ದಾಖಲು

ಬೆಂಗಳೂರು : ಕುಡಿದ ಮತ್ತಿನಲ್ಲಿ ಬಾರ್ ನಲ್ಲಿ ಗಲಾಟೆ ಮಾಡಿದ ಕಿರುತೆರೆ ನಟನ ಮೇಲೆ ಆರ್.ಆರ್ ನಗರ ಪೊಲೀಸ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಅಮೃತವರ್ಷಿಣಿ ಹಾಗೂ ಅಣ್ಣತಂಗಿ ಧಾರವಾಹಿ ಖ್ಯಾತಿಯ ನಟ ಪ್ರಜ್ವಲ್ ಮೇಲೆ ಎಫ್ಐಆರ್ ದಾಖಲಾಗಿದೆ. ಆರ್.ಆರ್ ನಗರದ ಅಮೃತ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಸ್ನೇಹಿತ ಜೊತೆ ಮದ್ಯಪಾನ ಮಾಡುತ್ತಿದ್ದಾಗ ಕಿರಿಕ್ ಆಗಿತ್ತು. ಈ ವೇಳೆ ಪ್ರಜ್ವಲ್ ಮತ್ತು ಸಂಗಡಿಗರಿಂದ ಚೇತನ್ ಮೇಲೆ ಹಲ್ಲೆ ನಡೆಸಲಾಗಿತ್ತು.

ಮರದ ಪೀಸ್​​​ನಿಂದ ಹಲ್ಲೆ

ನಟ ಪ್ರಜ್ವಲ್ ಮರದ ಪೀಸ್​​​ನಿಂದ ಚೇತನ್ ಹಾಗೂ ಸ್ನೇಹಿತರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಮದಿಸಿದ್ದಾರೆ. ಬಾರ್​ನಲ್ಲಿ ಅಷ್ಟೇ ಅಲ್ಲದೆ ರಸ್ತೆಯಲ್ಲಿ ಗಲಾಟೆ ನಡೆದಿದೆ. ಗಲಾಟೆ ಬಳಿಕ ಚೇತನ್ ಸ್ನೇಹಿತರ ಮೇಲೆ ಪ್ರಜ್ವಲ್ ಮತ್ತೆ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಾರ್​​ ನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Exit mobile version