Site icon PowerTV

ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ: ಡಿ.ಕೆ ಶಿವಕುಮಾರ್ ಶಪಥ

ಬೆಂಗಳೂರು: ಕರ್ನಾಟಕವನ್ನ ಭ್ರಷ್ಟಾಚಾರ (Corruption) ಮುಕ್ತವನ್ನಾಗಿ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಇಂದು ಶಪಥ ಮಾಡಿದರು.

ಹೌದು, ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ (Congress Protest) ವೇಳೆ ಮಾತನಾಡಿದ ಅವರು, ಯಾರೂ ಲಂಚ ಕೇಳಬಾರದು. ಲಂಚ ಕೇಳದೆ ಕೆಲಸ ಮಾಡಿಕೊಡಬೇಕು. ನಾವು ಕಾಲ್ ಸೆಂಟರ್ ಮಾಡ್ತೀವಿ. ನಮ್ಮ ಕಾರ್ಯಕರ್ತರು ಲಂಚ ಕೇಳಿದ್ರೂ ಕೇಸ್ ಹಾಕೋದೇ ಹೇಳಿದರು.

ಇದನ್ನೂ ಓದಿ: ಚೇಲಾಗಿರಿ ಮಾಡಿ ಪ್ರತಾಪ್ ಸಿಂಹಗೆ ಅನುಭವವಿರಬೇಕು: ಎಂ.ಬಿ ಪಾಟೀಲ್​ 

ಉಚಿತ ವಿದ್ಯುತ್​ಗೆ ನೋಂದಣಿ ಆರಂಭ

ಫ್ರೀ ವಿದ್ಯುತ್​ಗೆ ನೋಂದಣಿ ಶುರುವಾಗಿದೆ.ಆತುರಪಡಬೇಡಿ ಎಲ್ಲಾವೂ ಸರಿಯಾಗುತ್ತೆ ಇನ್ನೂ ಸರ್ವರ್ ಕೂಡ ಕಡಿಮೆ ಆಗಿದೆ. ಅದಕ್ಕೆ ಗೃಹಲಕ್ಷ್ಮಿ ಯೋಜನೆಗೆ ನಾವು ಸ್ವಲ್ಪ ಟೈಮ್ ತೆಗೆದುಕೊಂಡಿದ್ದೀವಿ. ನಮ್ಮ ಕಾರ್ಯಕರ್ತರು ಪಕ್ಷ ಬೇಧ ಮರೆತು ಎಲ್ಲರಿಗೂ ಕೊಡುತ್ತೇವೆ ಎಂದರು. ಎರಡು ಸಾವಿರ ಬೇಕು, ಸಂಸಾರ ನಡೆಸಬೇಕು ಅಂತಿದ್ರೆ ಅರ್ಜಿ ಹಾಕಿಕೊಳ್ಳಲಿ ಎಂದು ಡಿಕೆಶಿ ಇದೇ ವೇಳೆಯಲ್ಲಿ ತಿಳಿಸಿದರು.

 

 

 

Exit mobile version