Site icon PowerTV

ಅಧ್ಯಕ್ಷರ ಗಡ್ಡದ ಬಗ್ಗೆ ಬಿಜೆಪಿ ಎಲ್ಲ ನಾಯಕರು ಮಾತಾಡ್ತಿದ್ದಾರೆ ಎಂದ ಕಾಂಗ್ರೆಸ್ ಸಚಿವ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಗಡ್ಡ ತೆಗೆಯುವುದಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಳ್ಳರ ಮಳ್ಳರ ಸರ್ಕಾರ, ಅಧ್ಯಕ್ಷರ ಗಡ್ಡದ ಬಗ್ಗೆ ಬಿಜೆಪಿಯ ಎಲ್ಲ ನಾಯಕರು ಮಾತಾಡ್ತಿದ್ದಾರೆ. ಬೊಮ್ಮಾಯಿ ಕೂಡ ಅತ್ತು ರಾಜಕಾರಣ ಮಾಡಿದವರೇ ಎಂದು ಟಾಂಗ್ ಕೊಟ್ಟಿದ್ದಾರೆ.

ಆರ್. ಅಶೋಕ್ ಅವರು ಡಿಸಿಎಂ ಆಗಿದ್ದವರು. ಅವರೆಲ್ಲ ಮಾತಾಡುವಾಗ ಹಗುರವಾಗಿ ಮಾತಾಡುವುದು ನಿಲ್ಲಿಸಬೇಕಾಗುತ್ತದೆ. ರಾಜ್ಯ ಜನ ಬಿಜೆಪಿಯವರಿಗೆ ೬೬ ಸೀಟು ಕೋಟ್ಟಿದ್ದಾರೆ. ಬಿಜೆಪಿಯವರ ಹಣೆ ಬರಹಕ್ಕೆ ಒಂದೇ ಒಂದು ಬಾರಿಯೂ ಮೆಜಾರಿಟಿ ಬಂದಿಲ್ಲ. ಜನರು ತೀರ್ಮಾನ ಮಾಡಿಯೇ ನಮಗೆ ಮೆಜಾರಿಟಿ ಕೊಟ್ಟಿದ್ದಾರೆ ಎಂದು ಕುಟುಕಿದ್ದಾರೆ.

ಇದನ್ನೂ ಓದಿ : ಡಿಸೆಂಬರ್​​ನಲ್ಲಿ ಈ ಸರ್ಕಾರ ಬಿದ್ದು ಹೋಗಲಿದೆ : ಕಟೀಲ್ ಭವಿಷ್ಯ

15 ಲಕ್ಷದ ವಿಷಯಕ್ಕೆ ಕೈ ಹಾಕ್ಬೇಕಾ?

ಇವರು ಅನ್ನಭಾಗ್ಯಕ್ಕೆ ಕನ್ನ ಹಾಕುವ ಬದಲು ಜಿಎಸ್ಟಿ ಪರಿಹಾರ ಬಗ್ಗೆ ಸಂಸದರು ಪ್ರಶ್ನೆ ಮಾಡಿದ್ದಾರಾ? ಒಂದು ದಿನವಾದರೂ ಮೋದಿ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡಿದ್ದಾರಾ? ಇವರು ಕೂಡ ಬೇಕಾದಷ್ಟು ಪ್ರಾಮಿಸ್ ನೀಡಿದ್ರು ಒಂದಾದರೂ ಈಡೇರಿಸಿದ್ದಾರಾ? 15 ಲಕ್ಷದ ವಿಷಯಕ್ಕೆ ಕೈ ಹಾಕಬೇಕಾ ನಾವೀಗ. ಇವರು ಕೇವಲ ತೆಗೆದುಕೊಳ್ಳುವುದು ಮಾತ್ರ, ಕೊಟ್ಟು ಗೊತ್ತೇ ಇಲ್ಲ. ಬಿಜೆಪಿಯವರಿಗೆ ಬೇರೆ ಎಲ್ಲ ಯೋಜನೆಗಳನ್ನು ನಿಲ್ಲಿಸಿ ಬಿಡ್ತಾರಾ ಇವರು? ಎಂದು ಗುಡುಗಿದ್ದಾರೆ.

ವರ್ಗಾವಣೆ ಕಳೆದ ಆರೇಳು ತಿಂಗಳಿಂದ ನಿಂತು ಹೋಗಿತ್ತು. ಇಂದು ಮಧ್ಯಾಹ್ನದಿಂದ ಕೌನ್ಸೆಲಿಂಗ್ ಪ್ರಾರಂಭ ಆಗಿದೆ. ಬಹಳ ಒತ್ತಡ ಇದ್ದ ಕಾರಣದಿಂದ ತಕ್ಷಣವೇ ಕೌನ್ಸೆಲಿಂಗ್ ಪ್ರಾರಂಭ ಮಾಡ್ತಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

Exit mobile version