Site icon PowerTV

ವಾರದಲ್ಲೇ 3 ಕೋಟಿ ಮಹಿಳೆಯರ ಫ್ರೀ ಪ್ರಯಾಣ : ಸರ್ಕಾರದ ಬೊಕ್ಕಸಕ್ಕೆ ನಷ್ಟವಾದ ದುಡ್ಡು ಎಷ್ಟು?

ಬೆಂಗಳೂರು: ಕಾಂಗ್ರೆಸ್ ರಾಜ್ಯದಲ್ಲಿ ​ಅಧಿಕಾರಕ್ಕೆ ಬಂದು ತನ್ನ ಗ್ಯಾರಂಟಿಯಲ್ಲೊಂದು ಆದ  ಶಕ್ತಿ ಯೋಜನೆಯನ್ನು ಈಗಲೇ ರಾಜ್ಯದಲ್ಲಿ ಜಾರಿಗೆ ತಂದಿದೆ. ಈ ಯೋಜನೆಯೂ ಜೂನ್​ 11ರಿಂದಲ್ಲೇ ರಾಜ್ಯದಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಆರಂಭಿಸಿದ್ದು, ಈ ಸೇವೆಯನ್ನು ಜನರು ಖುಷಿಯಿಂದ  ಆನಂದಿಸಿದ್ದಾರೆ.

ಹೌದು, ಮಹಿಳೆಯರು ಬಸ್​ ಟಿಕೆಟ್​ ಫ್ರೀಯೆಂದೂ ತಮಗಿಷ್ಟವಾದ ಧಾರ್ಮಿಕ ಕ್ಷೇತ್ರಗಳಿಗೆ  ಭೇಟಿ ನೀಡಿ ಖುಷಿಪಡುತ್ತಿದ್ದಾರೆ, ಇನ್ನೂ ನಾವು ಯಾವುದೇ ಸರ್ಕಾರಿ ಬಸ್ ನೋಡಿದರೂ ಅದರಲ್ಲಿ ಮಹಿಳೆಯರೇ ಹೆಚ್ಚು ಕಾಣಿಸುತ್ತಿದ್ದು, ಕಳೆದ ಒಂದು ವಾರದಿಂದ ಪ್ರವಾಸ ಮಾಡುತ್ತಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗದ ವೆಚ್ಚವೆಷ್ಟು.? ಎಂಬ ಸಂಪೂರ್ಣ ಮಾಹಿತಿ ಈ ಕೆಳಗಿನಂತ

ಜೂನ್ 11ರಿಂದ 17ರ ವರೆಗೆ ಎಷ್ಟು ಮಹಿಳೆಯರು ಪ್ರಯಾಣಿಸಿದ ಪ್ರಯಾಣದ ವೆಚ್ಚದ ವೆಚ್ಚವೆಷ್ಟು ಇಲ್ಲಿದೆ ಸಂಪೂರ್ಣ ಮಾಹಿತಿ….

ಯೋಜನೆ ಜಾರಿಯಾದ ದಿನದಿಂದ ಜೂನ್ 17ರ ಶನಿವಾರದವರೆಗೆ ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ವೆಚ್ಚ 69 ಕೋಟಿ 77 ಲಕ್ಷದ 68 ಸಾವಿರದ 971 ರೂಪಾಯಿ ಆಗಿದೆ. ಒಟ್ಟು 3 ಕೋಟಿ 12 ಲಕ್ಷದ 9 ಸಾವಿರದ 696 ಮಂದಿ ಪ್ರಯಾಣ ಮಾಡಿದ್ದಾರೆ.

Exit mobile version