Site icon PowerTV

ಧಮ್ಮು, ತಾಕತ್ತು ಅಂತೀರಲ್ಲ ಅದನ್ನ ಈಗ ಬಂದು ತೋರಿಸಿ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಮಾತು ಎತ್ತಿದ್ರೆ ಧಮ್ಮು, ತಾಕತ್ತು ಅಂತೀರಲ್ಲ, ಅದನ್ನ ಈಗ ಬಂದು ತೋರಿಸಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ಸವಾಲ್ ಹಾಕಿದ್ದಾರೆ.

ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಅವರಿಗೆ ಕಾನೂನು ಸುವ್ಯವಸ್ಥೆ ಹಾಗೂ ಆಡಳಿತ ಮರೆತುಹೋಗಿದೆ ಎಂದು ಛೇಡಿಸಿದ್ದಾರೆ.

ನಾಳೆ ಪ್ರತಿಭಟನೆ ಇದೆ. ಕೇಂದ್ರದ ವಿರುದ್ಧ ನಾಳೆ ಪ್ರತಿಭಟನೆಗೆ ಬಿಜೆಪಿಗೂ ಆಹ್ವಾನ ಇದೆ. ನೀವು ಬನ್ನಿ! 25 ಸಂಸದರು ಇದ್ದೀರಾ, ಈಗಲಾದ್ರೂ ಬನ್ನಿ. ಧಮ್ಮು, ತಾಕತ್ತು ಅಂತೀರಲ್ಲ ಅದನ್ನ ಈಗ ಬಂದು ತೋರಿಸಿ. ರಾಜಕೀಯ ಮಾಡಿದ್ರೆ ಬಡವರ‌ ಹೊಟ್ಟೆಗೆ ತಟ್ಟಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರಕ್ಕೆ ಶುಭ ಶಕುನವೇಕೋ ‘ಕೈ’ ಹಿಡಿದಿಲ್ಲ : ಬಿ.ವೈ ವಿಜಯೇಂದ್ರ

ಇದಕ್ಕೆ ಜನ ವಿಪಕ್ಷ ಸ್ಥಾನದಲ್ಲಿ ಇಟ್ಟಿದ್ದಾರೆ

ಅವರ(ಬಿಜೆಪಿ) ಆಡಳಿತ ನೋಡಿಯೇ ರಾಜ್ಯದ ಜನರು ಅವರನ್ನು ವಿಪಕ್ಷದಲ್ಲಿ ಇಟ್ಟಿದ್ದಾರೆ. ಅಕ್ಕಿ ಖರೀದಿ ಮಾಡಲು ಆಗ್ತಿಲ್ಲ ಅಂತಿದ್ದಾರೆ. ಯಾವುದೇ ರಾಜ್ಯ ಸರ್ಕಾರ ಆದ್ರೂ ಕೇಂದ್ರದ ಮೊರೆ ಹೋಗಿದ್ದಾರೆ. ಕೇಂದ್ರದಿಂದಲೇ ಖರೀದಿ ಮಾಡಬೇಕು ಅಂತಿದೆ. ಜೂನ್ 12ರಂದು ಅಕ್ಕಿ ಖರೀದಿ ಮಾಡಬೇಕು ಅಂತಿದೆ. ಮತ್ತೊಂದು ಆದೇಶ ಮಾಡ್ತಿದ್ದಾರೆ. ಖಾಸಗಿಯಾಗಿ ಖರೀದಿ ಮಾಡಿ ಅಂತ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮೋದಿ ನೋಡಿ ವೋಟ್ ಹಾಕ್ಲಿಲ್ಲ ಅಂತನಾ?

ಕನ್ನಡಿಗರ ಮೇಲೆ ಯಾಕೆ ಇಷ್ಟೊಂದು ದ್ವೇಷ? ಪ್ರಧಾನಿ ಮೋದಿ ನೋಡಿ ವೋಟ್ ಹಾಕಲಿಲ್ಲ ಅಂತ ದ್ವೇಷ ತೀರಿಸಿಕೊಳ್ತಿದ್ದೀರಾ? ನಾವು ಪುಕ್ಸಟ್ಟೆ ಏನು ಕೇಳಿದ್ವಾ? ಆಶೀರ್ವಾದ ಸಿಗೋದಿಲ್ಲ ಅನ್ನೋದ್ರ ಧಮಕಿ, ಅನುಷ್ಠಾನಕ್ಕೆ ತರ್ತೀರಾ? ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

Exit mobile version