Site icon PowerTV

Anna Bhagya: ಕೇಂದ್ರದ ವಿರುದ್ಧ ಸಚಿವ ಎಚ್. ಕೆ ಪಾಟೀಲ್ ಕಿಡಿ

ಬೆಂಗಳೂರು: ಕಾಂಗ್ರೆಸ್​ ಗ್ಯಾರಂಟಿಯಲ್ಲೊಂದು ಆದ ಅನ್ನಭಾಗ್ಯ ಯೋಜನೆಯ ವಿಚಾರದಲ್ಲಿ ರಾಜ್ಯದಲ್ಲಿ ಭಾರೀ ಚರ್ಚೆಗಳು ಆಗುತ್ತಿದ್ದು, ಕಾಂಗ್ರೆಸ್​ ನಾಯಕರು ಅಕ್ಕಿಯ ವಿಚಾರವಾಗಿ ಒಂದೊಂದು ಹೇಳಿಕೆಯನ್ನು ನೀಡಿ ಕೇಂದ್ರದ ವಿರುದ್ದ ಕಿಡಿಕಾರಿದ್ದಾರೆ.

ಹೌದು, ಕೇಂದ್ರದಿಂದ 12ನೇ ತಾರೀಖು ಅಂಗ ಸಂಸ್ಥೆ ಎಫ್ ಸಿಐ ಪತ್ರ ಬರೆದಿತ್ತು. ಎಷ್ಟು ಅವಶ್ಯಕತೆ ಇದೆ ಅಷ್ಟು ಅಕ್ಕಿ ಕೊಡುತ್ತೇವೆ ಅಂತ ಹೇಳಿತ್ತು. ಎಫ್ ಸಿಐ ಡೆಪ್ಯೂಟಿ ಜನರಲ್ ಮ್ಯಾನೇಜರ್ ಮುಖ್ಯಮಂತ್ರಿಗಳ ಜೊತೆಗೂ ಮಾತಾಡಿದ್ದರು. ಇನ್ನೇನು ಪ್ರಕ್ರಿಯೆ ಆರಂಭಿಸಬೇಕು ಎನ್ನುವಷ್ಟರಲ್ಲಿ ರಾಜ್ಯಗಳಿಗೆ ಅಕ್ಕಿ ಕೊಡಲ್ಲ ಅಂದ್ರು ಎಂದಿದ್ದಾರೆ.ಬಳಿಕೆ 13 ರಂದು ಮತ್ತೊಂದು ಪತ್ರವನ್ನು ಕಳಿಸಿ ಅಕ್ಕಿ ನಿಮ್ಮ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ಧಾರೆ.  ಕೇಂದ್ರ ಸರ್ಕಾರದ ಈ ನಡೆ ಖಂಡನೀಯ ಎಂದು ಸಚಿವ ಎಚ್ ಕೆ ಪಾಟೀಲ್ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಧಮ್ಮು, ತಾಕತ್ತು ಅಂತೀರಲ್ಲ ಅದನ್ನ ಈಗ ಬಂದು ತೋರಿಸಿ : ಪ್ರಿಯಾಂಕ್ ಖರ್ಗೆ

13 ರಂದು ಕಳುಹಿಸಿದ ಪತ್ರದಲ್ಲಿ ನಮ್ಮ ಬಳಿ 15 ಲಕ್ಷ ಮೆಟ್ರಿಕ್ ಟನ್ ಅಕ್ಕಿಯಿದೆ. ಅದನ್ನು ಲಿಕ್ವಿಡೇಟ್ ಮಾಡಲು ಖಾಸಗಿಯವರಿಗೆ ಬಿಡುಗಡೆ ಮಾಡಿ. ಅದೇ ದರದಲ್ಲಿ ಅಕ್ಕಿ ಖರೀದಿ ಮಾಡಲು ರಾಜ್ಯಗಳಿಗೆ ಬಿಡುಗಡೆ ಮಾಡಬೇಡಿ ಅಂತಾ ತಿಳಿಸಿದ್ದಾರೆ. ಇದು ಜನ ವಿರೋಧಿ ಅಲ್ಲದೆ ಮತ್ತೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿಯವರಿಗೆ ಮಾರಲು ಹೊರಟಿದ್ದಾರೆ

13ನೇ ತಾರೀಖು ಎಫ್ ಸಿಐ ಪತ್ರ ಬರೆದು ಈಶಾನ್ಯ ರಾಜ್ಯ ಹೊರತುಪಡಿಸಿ ಬೇರೆ ರಾಜ್ಯಗಳಿಗೆ ಅಕ್ಕಿ ಕೊಡಲ್ಲ ಅಂತ ತಿಳಿಸಿದೆ. ಎಫ್ ಸಿಐ ಬಳಿ 15 ಲಕ್ಷ ಮೆಟ್ರಿಕ್ ಟನ್ ಇದೆ. ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿದ್ದಾರೆ. ನಮಗೆ ಬೇಕಾಗಿದ್ದು 2 ಲಕ್ಷ 8 ಸಾವಿರ ಟನ್ ಅಕ್ಕಿ ಮಾತ್ರ. ಆದರೆ, ರಾಜ್ಯಗಳಿಗೆ ಕೊಡಬೇಡಿ, ಖಾಸಗಿಯವರಿಗೆ ಮಾರಾಟ ಮಾಡಿ ಅಂತಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರವನ್ನು ಇಕ್ಕಟ್ಟಿಕೆ ಸಿಲುಕಿಸುವ ಕೆಲಸವನ್ನು ಕೇಂದ್ರ ಮಾಡುತ್ತಿದೆ. ನಮ್ಮ ಅನ್ನಭಾಗ್ಯ ಯೋಜನೆಯನ್ನು ನಾವು ಘೋಷಣೆ ಮಾಡಿದ್ದೇವೆ. ಹಾಗಾಗಿ, ನಾವು ಅನುಷ್ಠಾನ ಮಾಡುತ್ತೇವೆ ಎಂದರು.

 

 

Exit mobile version