Sunday, August 24, 2025
Google search engine
HomeUncategorizedಥೈರಾಯ್ಡ್ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಥೈರಾಯ್ಡ್ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಬೆಂಗಳೂರು : ಥೈರಾಯ್ಡ್ ಸಮಸ್ಯೆಯನ್ನು ಹೋಗಲಾಡಿಸಲು ಮನೆಯಲ್ಲೇ ಕೆಲವು ಔಷಧಿಗಳನ್ನು ಮಾಡಿಕೊಳ್ಳಬಹುದು. ಯಾವುದೇ ಖರ್ಚಿಲ್ಲದೆ ಮನೆಯಲ್ಲೇ ಇರುವ ವಸ್ತುಗಳಿಂದ ಈ ಮನೆಮದ್ದು ತಯಾರಿಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

  1. ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು ಅದನ್ನು ಜಜ್ಜಿ ಅದರ ರಸ ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ವಿಧಾನವನ್ನು 20 ದಿನ ನಿರಂತರವಾಗಿ ಮಾಡಿದ್ರೆ, ಥೈರಾಯ್ಡ್ ಸಮಸ್ಯೆ ಮಾಯವಾಗುತ್ತೆ.
  2. ಈರುಳ್ಳಿಯನ್ನು ಅರ್ಧ ಭಾಗ ಮಾಡಿ ಗಂಟಲಿನ ಭಾಗಕ್ಕೆ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದಲೂ ಥೈರಾಯ್ಡ್ ಸಮಸ್ಯೆ ಕಡಿಮೆಯಾಗಲಿದೆ.

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ. ಸುಲಭ ಹಾಗೂ ಸರಳವಾಗಿರುವ ಮನೆಮದ್ದು ಬಳಸಿ, ಆರೋಗ್ಯ ಕಾಪಾಡಿಕೊಳ್ಳಿ.

ಇದನ್ನೂ ಓದಿ : ಹಲ್ಲುಗಳ ಆರೈಕೆ ಇಲ್ಲಿವೆ ಕೆಲವು ಟಿಪ್ಸ್

ಥೈರಾಯ್ಡ್ ಲಕ್ಷಣಗಳು

  • ಪದೇ ಪದೇ ಆಯಾಸವಾಗುವುದು
  • ಕೂದಲು ಉದುರುವುದು
  • ನಡುಕ, ಬೆವರುವಿಕೆ ಜಾಸ್ತಿ ಇರುವುದು
  • ಅನಿರೀಕ್ಷಿತವಾಗಿ ತೂಕ ಏರಿಕೆ ಆಗುವುದು
  • ಸಣ್ಣ ಸಣ್ಣ ವಿಷಯಕ್ಕೂ ಕೋಪ ಬರುವುದು

ಈ ರೀತಿಯ ಲಕ್ಷಣಗಳು ಅಥವಾ ಸಮಸ್ಯೆಗಳು ಇದ್ದರೆ, ಕೂಡಲೇ ವೈದ್ಯರ ಬಳಿ ಹೋಗಬೇಕು. ವೈದ್ಯರ ಸಲಹೆಗಳನ್ನು ಪಡೆದು ಚಿಕಿತ್ಸೆ ಪಡೆಯುವುದು ಒಳ್ಳೆಯದು.

  • ರಜನಿ ಎ.ಕೆ, ಪವರ್ ಟಿವಿ
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments