Site icon PowerTV

ದೇವೇಗೌಡರನ್ನೇ ಸಿದ್ದರಾಮಯ್ಯ ಆಟ ಆಡಿಸಿದವರು, CM ಸ್ಥಾನ ಬಿಟ್ಕೊಡ್ತಾರಾ? : ಆರ್. ಅಶೋಕ್

ಬೆಂಗಳೂರು : ದೇವೇಗೌಡ ಅವರನ್ನೇ ಸಿದ್ದರಾಮಯ್ಯ ಆಟ ಆಡಿಸಿದವರು. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಕೊಡಲ್ಲ ಎಂದು ಮಾಜಿ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರೆ ಎಂಬ ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ಹೇಳಿಕೆ ವಿಚಾರ ಬೆಂಗಳೂರಿನಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಹಾದೇವಪ್ಪ ಸತ್ಯ ಹೇಳಿದಾರೆ. ಕಳೆದ ಒಂದು ತಿಂಗಳಿಂದ ಅದೇ ಹೇಳಿದ್ರು. ಸಚಿವ ಎಂ.ಬಿ ಪಾಟೀಲ್ ಅದನ್ನೇ ಹೇಳಿರೋದು. ಕಳೆದ ಒಂದು ವರ್ಷದಿಂದ ಜಮೀರ್ ಇದನ್ನೇ ಡಂಗೂರ ಸಾರುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಐದು ವರ್ಷ ಸಿಎಂ ಅಂತ ಅವರೆಲ್ಲ ಫಿಕ್ಸ್ ಆಗಿದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತೆ ಕಾದು ನೋಡಿ : ಬಿ.ವೈ ವಿಜಯೇಂದ್ರ

ಡಿಕೆಶಿ ತಿರುಕನ ಕನಸು ಕಾಣ್ತಿದಾರೆ

ಡಿ.ಕೆ ಶಿವಕುಮಾರ್ ಇಲ್ಲದ ಪಾಡೆಲ್ಲ ಪಟ್ರೂ, ಸಿಎಂ ಆಗುವಲ್ಲಿ ಸಫಲ ಆಗಲಿಲ್ಲ. ಡಿಕೆಶಿ ತಿರುಕನ ಕನಸು ಕಾಣ್ತಿದಾರೆ. ಸಿದ್ದರಾಮಯ್ಯ ಚಾಣಕ್ಯ. ದೇವೇಗೌಡರೇ ಸಿದ್ದರಾಮಯ್ಯರನ್ನು ನೋಡಿ ಹೆದರುತ್ತಾರೆ. ದೇವೇಗೌಡ ಅವರನ್ನೇ ಸಿದ್ದರಾಮಯ್ಯ ಆಟ ಆಡಿಸಿದವರು. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಕೊಡಲ್ಲ. ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನ ಬೀದಿ ರಂಪಾಟ ಆಗೋದು ಪಕ್ಕಾ ಎಂದು ಕುಟುಕಿದ್ದಾರೆ.

ಸಿದ್ದರಾಮಯ್ಯ ಹಾಕಿದ ಗೆರೆ ದಾಟಲ್ಲ

ಸಿಎಂ ಸಿದ್ದರಾಮಯ್ಯಗೆ ನಾನು ಒಪನ್ ಚಾಲೆಂಜ್ ಹಾಕ್ತಿನಿ. ಸಿಎಂ ಸಿದ್ದರಾಮಯ್ಯ ಹೇಳಬೇಕು. ನಾನು ಎರಡು ವರ್ಷದ ನಂತರ ಸಿಎಂ ಸ್ಥಾನ ಬಿಟ್ಟು ಕೊಡ್ತಿನಿ ಅಂತ. ಧೈರ್ಯವಾಗಿ ಸಿದ್ದರಾಮಯ್ಯ ಹೇಳಲಿ ನೋಡೋಣ. ಇಲ್ಲ ಅಂದ್ರೆ ಸಿದ್ದರಾಮಯ್ಯ ಏಕೆ ತಮ್ಮ ಆಪ್ತ ಸಚಿವರ ಮೂಲಕ ಹೇಳಿಕೆ ಕೊಡಿಸಬೇಕು. ಸಚಿವ ಮಹದೇವಪ್ಪ, ಜಮೀರ್ ಇವರು ಯಾರು ಸಿದ್ದರಾಮಯ್ಯ ಹಾಕಿದ ಗೆರೆ ದಾಟಲ್ಲ ಎಂದು ಹೇಳಿದ್ದಾರೆ.

Exit mobile version