Site icon PowerTV

ನಟ ಸುದೀಪ್​ಗೆ ಅನುಭವ ಕಡಿಮೆ ಇದೆ, ಅರಿತು ಮುಂದುವರೆಯಲಿ : ಕೆ.ಎನ್ ರಾಜಣ್ಣ ಕಿಡಿ

ದಾವಣಗೆರೆ : ನಟ ಸುದೀಪ್ ಸಮುದಾಯದ ವಿರುದ್ಧವೇ ಪ್ರಚಾರಕ್ಕೆ ಇಳಿದಿದ್ದು ವಿಪರ್ಯಾಸ. ಇದು ಪ್ರತಿಭಾನ್ವಿತ ನಟನ ಭವಿಷ್ಯಕ್ಕೆ ಕುತ್ತು ತರುತ್ತೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಭವಿಷ್ಯ ನುಡಿದಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ‌ ವಾಲ್ಮೀಕಿ ಪೀಠದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ವಾಲ್ಮೀಲಿ ಸಮುದಾಯದ ವಿರುದ್ಧವೇ ಪ್ರಚಾರ ಮಾಡಿದ್ದ ಸುದೀಪ್ ವಿರುದ್ಧ ಕಿಡಿಕಾರಿದ್ದಾರೆ.

ನಟ ಸುದೀಪ್ ಅವರು ಸಮುದಾಯದ ವಿರುದ್ದವೇ ಪ್ರಚಾರ ಮಾಡಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಬಂದು ಪ್ರಚಾರ ಮಾಡಿದ್ರೆ ಏನು ಅನ್ನಿಸ್ತಾ ಇರಲಿಲ್ಲ. ಎಸ್ಟಿ ಮೀಸಲು ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು ನೋವು ಅನ್ನಿಸ್ತು. ಎಸ್ಟಿ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ನಿಂತವರೆಲ್ಲ ನಾಯಕ ಸಮುದಾಯದವರೇ. ಅತನಿಗೆ ಅನುಭವ ಕಡಿಮೆ ಇದೆ, ಶ್ರೇಷ್ಠ ನಟನಾಗಲು ಅವಕಾಶ ಇದೆ. ಇದನ್ನು ಅರಿತುಕೊಂಡು ಮುಂದುವರೆಯಲಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ನಟ ಸುದೀಪ್ ಪ್ರಚಾರ ನಡೆಸಿದ್ದ ಕ್ಷೇತ್ರದಲ್ಲಿ ‘ಬಿಜೆಪಿಗೆ ಹೀನಾಯ ಸೋಲು’

ರಾಜಕಾರಣಿಗಳಿಗೆ ಸುಳ್ಳೇ ಬಂಡವಾಳ

ಎಸ್ಟಿ ಸಮುದಾಯದ ಹೆಸರಲ್ಲಿ ನಕಲಿ ಜಾತಿ ಪ್ರಮಾಣ, ಅದು ಎಲ್ಲರಿಗೂ ಗೊತ್ತು. ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ. ನಕಲಿ ಜಾತಿ ಪತ್ರ ವ್ಯವಸ್ಥೆ ತಪ್ಪಿಸದಿದ್ದರೆ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗತ್ತೆ. ರಾಜಕಾರಣಿಗಳಿಗೆ ಸುಳ್ಳೇ ಬಂಡವಾಳ. ನಕಲಿ ಜಾತಿ ಪತ್ರ ತಪ್ಪಿಸುವ ಕೆಲಸ ಮಾಡುತ್ತೇವೆ. ಮೀಸಲಾತಿ‌ ಶೇ.50 ರಷ್ಟು ದಾಟಿರೋದ್ರಿಂದ ಎಸ್ಟಿ ಮೀಸಲು 9 ಶೆಡ್ಯೂಲ್ ಗೆ ಸೇರಿಸಲು ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ನಾನು ಸಾಮಾನ್ಯ ಕ್ಷೇತ್ರದಿಂದ‌ ಸ್ಪರ್ಧಿಸಿದ್ದು. ನನ್ನ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯ 100ಕ್ಕೆ 100 ರಷ್ಟು ಮತ ಹಾಕಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ.

Exit mobile version