Site icon PowerTV

ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ಕೊಟ್ಟ ಸಂಸದ ಡಿ.ಕೆ ಸುರೇಶ್

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ವಿಚಾರದಲ್ಲಿ ಸದ್ಯ ಯಾವುದೇ ತೀರ್ಮಾನ ಮಾಡಿಲ್ಲ, ಕಾರ್ಯಕರ್ತರ ಸಲಹೆ ಪಡೆದು ಮುಂದುವರೆಯುವೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಹೇಳಿಕೊಂಡಿದ್ದಾರೆ.

ಹೌದು,ಇಂದು ಮಾಧ್ಯಮಗಳ ಜೊತೆ ಮಾತನಾಡಿರುವ ಸಂಸದ ಡಿ.ಕೆ ಸುರೇಶ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಯ ಬಗ್ಗೆ  ನಾನು ಇನ್ನೂ ಯಾವುದೇ ತೀರ್ಮಾನ  ಮಾಡಿಲ್ಲ. ಕಾರ್ಯಕರ್ತರ, ಮುಖಂಡರ ಸಲಹೆ ಪಡೆಯಬೇಕು.

ಇದನ್ನೂ ಓದಿ: ಕಾಂಗ್ರೆಸ್ಸಿಗರು ನನ್ನ ಕೆಲಸದ ಪ್ರಚಾರ ಮಾಡಲಿಲ್ಲ : ಸಚಿವ ಹೆಚ್.ಸಿ ಮಹದೇವಪ್ಪ

ಇಂದಿನ ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ. ರಾಜಕೀಯ ಸಾಕಾಗಿದೆ. ಬೇರೆಯವರಿಗೆ ಅವಕಾಶ ನೀಡುವುದು ನನ್ನ ಉದ್ದೇಶ  ಅಧಿಕಾರದ  ದಾಹ ಇರುವವರಿಗೆ ರಾಜಕೀಯ ಬೇಕಾಗುತ್ತದೆ. ಆದರೆ ನನಗೆ ಇರುವುದು ಅಭಿವೃದ್ದಿಯ ದಾಹ ಎಂದರು.

ಡಿ.ಕೆ ಸುರೇಶ್ , ನನಗೆ ರಾಜಕಾರಣ ಸಾಕೆನಿಸಿಬಿಟ್ಟಿದೆ ಎನ್ನುವ ಮೂಲಕ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುತ್ತಾರೆಯೇ ಎಂಬ ಪ್ರಶ್ನೆ ಹುಟ್ಟು ಹಾಕಿದ್ದರು.

Exit mobile version