Site icon PowerTV

Ashada Masa : ಆಷಾಢ ಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದು ಏಕೆ ಗೊತ್ತಾ? 

ಬೆಂಗಳೂರು : ಸಾಂಪ್ರದಾಯದ ಪ್ರಕಾರ ಆಷಾಢ ಮಾಸವನ್ನು ಶೂನ್ಯ ಮಾಸ, ಅಮಂಗಳಕರ ಮಾಸವೆಂದೂ ಕರೆಯುತ್ತಾರೆ. ಆದರೆ ನಮ್ಮ ಹಿಂದೂ ಸಂಸ್ಕೃತಿಯ ಪ್ರತಿಯೊಂದು ಆಚರಣೆಯ ಹಿಂದೆಯೊಂದು ಮಹತ್ವದ ಕಾರಣವಂತೂ ಇದ್ದೇ ಇರುತ್ತದೆ.

ಹೌದು, ನಮ್ಮ ಪೂರ್ವಿಕರು ದೈವಿಕ ಕಾರಣಗಳನ್ನೂ ನೀಡಿ ಶುಭ ಕಾರ್ಯಗಳಿಗೆ ತಡೆಯಾಜ್ಞೆ ಹೇರಿದ್ದರೂ ಇದರ ಹಿಂದೆಯೂ ಒಂದು ಕಾರಣವಿರಬಹುದು. ಈ ಮಾಸದಲ್ಲಿ ಹೆಚ್ಚು ಮಳೆ ಬರುವುದು ಇದಕ್ಕೆ ಒಂದು ಕಾರಣವಿರಬಹುದು. ಅಂದ್ರೆ ಈ ಸಂಪ್ರದಾಯವನ್ನೂ ಕೆಲವರು ಫಾಲೋ ಮಾಡಬಹುದು ಇಲ್ಲವೇ ಆಗಿ ಕೂಡ ಇರಬಹುದು.

ಇದನ್ನೂ ಓದಿ : ವಾರಾಹಿ ನವರಾತ್ರಿ : ಆಷಾಢ ಮಾಸದಲ್ಲಿ ಆಚರಿಸುವ ‘ಗುಪ್ತ ನವರಾತ್ರಿ’ಯ ಮಹತ್ವವೇನು?

ಇನ್ನೂ ಈ ಆಷಾಢದಲ್ಲಿ ಹೊಸದಾಗಿ ಮದುವೆಯಾದ ಹೆಣ್ಣು ಅತ್ತೆಯ ಮನೆಯಲ್ಲಿ ಇರಬಾರದು ತನ್ನ ತವರಿಗೆ ಹೋಗಬೇಕು ಎಂಬ ನಂಬಿಕೆ ಇದೆ. ಹಾಗಾಗಿ ಈ ಸೊಸೆಯನ್ನು ಆಷಾಢ ಮುಗಿಯುವರೆಗೂ ತವರುಮನೆಗೆ ಕಳುಹಿಸುವ ಸಂಪ್ರದಾಯ ನಮ್ಮಲಿದೆ.

ಸಾಂಪ್ರದಾಯಿಕ ಆಚರಣೆಯಲ್ಲಿ ನವ ವಧು ಯಾಕೆ ಗಂಡನ ಮನೆಯಲ್ಲಿ ಇರಬಾರದು ಇಲ್ಲಿದೆ ನೋಡಿ ಕಾರಣ 

ಮದುವೆಯಾದ ನವ ವಧು ಮತ್ತು ಅತ್ತೆ ಒಂದೇ ಹೊಸ್ತಿಲು ದಾಟಬಾರದು. ಈ ರೀತಿ ನಡೆದ್ರೆ ಮುಂದೆ ಇಬ್ಬರ ಬಾಂಧವ್ಯದಲ್ಲಿ ಮನಸ್ತಾಪ ಉಂಟಾಗಬಹುದು. ಹಾಗಾಗಿ ವಧುವನ್ನು ತವರಿಗೆ ಕಳಿಸಿಕೊಡುತ್ತಾರೆ.

ಆಷಾಢಮಾಸದಲ್ಲಿ ಹೊಸದಾಗಿ ಮದ್ವೆಯಾದ ಹೆಣ್ಣು ಮಕ್ಕಳು ಇಲ್ಲಿವೆ ಕೆಲವೊಂದು ಸಲಹೆಗಳು..

ಇವೆಲ್ಲಾ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇದನ್ನು ಕೆಲವರು ಆಚರಣೆ ಮಾಡುತ್ತಾರೆ. ಇನ್ನೂ ಕೆಲವರು ಮೂಡನಂಬಿಕೆಯೆಂದು ಯಾವುದೇ ಆಚರಣೆಯನ್ನು ಅನುಸರಿಸುವಿದಿಲ್ಲ. ಇದೆಲ್ಲಾ ಅವರ ನಂಬಿಕೆಗೆ ಬಿಟ್ಟ ವಿಚಾರವಾಗಿದೆ.

Exit mobile version