Site icon PowerTV

ಧಮ್ಮು, ತಾಕತ್ತು ಇದ್ರೆ ಷರತ್ತುಗಳಿಲ್ಲದೆ ಗ್ಯಾರಂಟಿಗಳನ್ನ ಜಾರಿ ಮಾಡ್ಲಿ ; ಆರ್. ಅಶೋಕ್

ಬೆಂಗಳೂರು: ಅನ್ನ ಭಾಗ್ಯ ಸ್ಕೀಮ್​​ಗೆ ಅಗತ್ಯವಿರುವ ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡುತ್ತಿಲ್ಲವೆಂದು ಆರೋಪಿಸಿದ ಕಾಂಗ್ರೆಸ್ ಇದೀಗ  ಪ್ರತಿಭಟನೆ ಹಮ್ಮಿಕೊಳ್ಳುತ್ತದಂತೆ. ಅವರಿಗೆ ನಾನು ಶಾಮಿಯಾನ ವ್ಯವಸ್ಥೆ ಬೇಕಿದ್ದರೆ ಮಾಡುತ್ತೇವೆ. ಧಮ್, ತಾಕತ್​ ಇದ್ರೆ ಷರತ್ತುಗಳನ್ನು ತೆಗೆದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಿ ಎಂದು ಕಾಂಗ್ರೆಸ್​ ವಿರುದ್ಧ ಬೆಂಗಳೂರಿನಲ್ಲಿ ವಾಗ್ದಾಳಿ ಮಾಡಿದ್ದಾರೆ.

ಹೌದು,ಗ್ಯಾರಂಟಿ ಯೋಜನೆಯನ್ನು ಮೊದಲು ಜಾರಿ ಮಾಡ್ಲಿ  ಆಮೇಲೆ ಬೇಕಿದ್ದರೆ ಬಿಜೆಪಿಯ ಧಮ್, ತಾಕತ್ ಪ್ರಶ್ನೆ ಮಾಡಲಿ. ಅವರ ಗ್ಯಾರಂಟಿ ಘೋಷಣೆ ಜಾರಿ ಮಾಡದೇ ಇದ್ದರೆ ಕಾಂಗ್ರೆಸ್ ಮನೆಗೆ ಹೋಗೋದು ಖಚಿತ. ನೀವು ಘೋಷಣೆ ಮಾಡುವಾಗ ಕೇಂದ್ರ ಸರಕಾರವನ್ನ ಕೇಳಿ ಮಾಡಿದ್ರಾ? ಅಣ್ಣಯ್ಯ ಡಿ.ಕೆ. ಶಿವಕುಮಾರ್ ನೀನು‌ ಕೊಟ್ಟ ಭರವಸೆ ಉಳಿಸಿಕೊಳ್ಳಿ ಎಂದು ಹೇಳಿದರು.

ಇದನ್ನೂ ಓದಿ: ಒಡೆದು ಆಳುವ ‘ಬ್ರಿಟಿಷ್’ ಮನಸ್ಥಿತಿಯಿಂದ ಕಾಂಗ್ರೆಸಿಗರು ಹೊರ ಬರಬೇಕು : ಬಿ.ಸಿ ನಾಗೇಶ್

ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮತ್ತೊಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳಬೇಡಿ. ನಿಮಗೆ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ, ನಾವು ಮಾಡುತ್ತೇವೆ. 10 ಕೆಜಿ ಅಕ್ಕಿ ನೀವು ಘೋಷಣೆ ಮಾಡಿದ್ದಾ, ಕೇಂದ್ರ ಸರ್ಕಾರ ಮಾಡಿದ್ದಾ? ಏನೇ ಆಗಲೀ ಈ ಕಾಂಗ್ರೆಸ್​ ಸರ್ಕಾರ ಲೋಕಸಭೆ ಚುನಾವಣೆವರೆಗೆ ತಳ್ಳಿಕೊಂಡು ಹೋಗಬೇಕು ಅಷ್ಟೇ, ಅಮೇಲೆ ನಾನೊಂದು ತೀರ-ನೀನೊಂದು ತೀರ ಅಷ್ಟೇ ಈ ಕಾಂಗ್ರೆಸ್ ಮಂದಿ ಎಂದು ಆರ್. ಅಶೋಕ್ ಹೇಳಿದ್ದಾರೆ

 

Exit mobile version