Site icon PowerTV

ಬಿಪರ್ ಜಾಯ್ ಎಫೆಕ್ಟ್ : 23 ಪ್ರಾಣಿಗಳು ಮೃತ, 22 ಮಂದಿ ಗಾಯ

ಬೆಂಗಳೂರು : ಗುಜರಾತ್ ಕಚ್ ಪ್ರದೇಶಕ್ಕೆ ನಿನ್ನೆ ಅಪ್ಪಳಿಸಿದ ಬಿಪರ್ ಜಾಯ್ ಚಂಡ ಮಾರುತ ಭಾರಿ ಅನಾಹುತ ಸೃಷ್ಟಿಸಿದೆ.

ಚಂಡ ಮಾರುತದ ಎಫೆಕ್ಟ್ ನಿಂದಾಗಿ  23 ಪ್ರಾಣಿಗಳು ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ. 500ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಸದ್ಯ ಭಿಪರ್ ಜಾಯ್ ಅಬ್ಬರ ತಗ್ಗಿದೆ.

ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಡಾ.ಮೃತ್ಯುಂಜಯ ಮಹಾಪಾತ್ರ ಅವರು, ಬಿಪರ್ ಜಾಯ್ ಚಂಡಮಾರುತವು ತನ್ನ ತೀವ್ರತೆಯನ್ನು ಕಳೆದುಕೊಂಡಿದೆ. ಸಾಧಾರಣ ಚಂಡಮಾರುತವಾಗಿ ಮಾರ್ಪಟ್ಟಿದೆ. ಗಂಟೆಗೆ 30 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಗುಜರಾತ್ ಕರಾವಳಿಗೆ ಬಿಪರ್ ಜಾಯ್ ಆಗಮನ : ಗಾಳಿ ಮಳೆ, ಅಬ್ಬರಿಸಿದ ಕಡಲು

ಸಾವಿರ ಗ್ರಾಮಗಳಿಗೆ ವಿದ್ಯುತ್ ಕಟ್

ನಿನ್ನೆ ಅರಬ್ಬಿ ಸಮುದ್ರದ ಕಡೆಯಿಂದ ಬಂದು ಅಪ್ಪಳಿಸಿದ ವೇಳೆ ಗಂಟೆಗೆ 125 ಕಿ.ಮೀ ವೇಗದ ಗಾಳಿ ಬೀಸುತ್ತಿತ್ತು. ಗಾಳಿ ಹಾಗೂ ಮಳೆ ಅಬ್ಬರದಿಂದ ಸಮುದ್ರದಲ್ಲಿ ಭಾರಿ ಅಲೆಗಳು ಉಂಟಾಗಿದ್ದವು. ಪರಿಣಾಮ ಗುಜರಾತ್ ನ ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. 1 ಸಾವಿರಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ದೆಹಲಿಯಲ್ಲಿ ಮಳೆ ಸಾಧ್ಯತೆ

ಇನ್ನೂ ಬಿಪರ್ ಜಾಯ್ ಚಂಡಮಾರುತದ ಪರಿಣಾಮದಿಂದ ನವದೆಹಲಿಯಲ್ಲಿ ಭರ್ಜರಿ ಮಳೆಯಾಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಮಳೆಯ ಪ್ರಮಾಣ ಕುಗ್ಗಲಿದೆ. ಹಗುರದಿಂದ ಸಾಧಾರಣ ಮಳೆ ಸಾಧ್ಯತೆಯಿದೆ. ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವವರು ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Exit mobile version