ಬೆಂಗಳೂರು: ಯಾವುದೇ ಕಾಮಕಾರಿಯನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ನಡೆಸದೇ ಕೋಟ್ಯಾಂತರ ರೂಪಾಯಿ ನಕಲಿ ಬಿಲ್ ಸೃಷ್ಟಿಸಿದ ಆರೋಪದ ಮೇಲೆ 11 ಬಿಬಿಎಂಪಿ(BBMP) ಅಧಿಕಾರಿಗಳನ್ನು ಸಸ್ಪೆಡ್ ಮಾಡಲಾಗಿದೆ.
ಹೌದು, 2019 -20ರಲ್ಲಿ ಕಳಪೆ ಕಾಮಗಾರಿ ಸಂಬಂಧ ಲೋಕಾಯುಕ್ತಕ್ಕೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್(DK Suresh) ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿನಗರ ವಲಯದ 9 ಬಿಬಿಎಂಪಿ ಇಂಜಿನಿಯರ್, ಓರ್ವ ಅಧೀಕ್ಷಕ, ಓರ್ವ ಉಪ ನಿರ್ದೇಶಕ ಸೇರಿದಂತೆ ಒಟ್ಟು 11 ಅಧಿಕಾರಿಗಳನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ: ತಾಕತ್ತು ಇದ್ರೆ ಷರತ್ತುಗಳಿಲ್ಲದೆ ಗ್ಯಾರಂಟಿಗಳನ್ನ ಜಾರಿ ಮಾಡ್ಲಿ ; ಆರ್. ಅಶೋಕ್
ಅಲ್ಲದೇ ಹಗರಣದ ತನಿಖೆಗಾಗಿ ಬೆಂಗಳೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಿಸಿದೆ.
ಸಸ್ಪೆಡ್ ಆದ ಅಧಿಕಾರಿಗಳು ಇವರೇ ನೋಡಿ
- ದೊಡ್ಡಯ್ಯ- ಮುಖ್ಯ ಇಂಜಿನಿಯರ್ ಟಿವಿಸಿಸಿ ವಿಭಾಗ
 - ಸತೀಶ್- ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಟಿವಿಸಿಸಿ ವಿಭಾಗ
 - ವಿಜಯ್ ಕುಮಾರ್- ಮುಖ್ಯ ಇಂಜಿನಿಯರ್ ಆರ್ಆರ್ ನಗರ ವಲಯ
 - ಶಿಲ್ಪಾ- ಸಹಾಯಕ ಇಂಜಿನಿಯರ್ ಆರ್ಆರ್ ವಲಯ
 - ಮೋಹನ್- ಮುಖ್ಯ ಇಂಜಿನಿಯರ್ ಯೋಜನಾ ವಿಭಾಗ ಆರ್ಆರ್ ವಲಯ
 - ಭಾರತಿ- ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯೋಜನಾ ವಿಭಾಗ ಆರ್ಆರ್ ವಲಯ
 - ಬಸವರಾಜ್- ಕಾರ್ಯಪಾಲಕ ಇಂಜಿನಿಯರ್ ಆರ್ಆರ್ ನಗರ ವಲಯ
 - ಸಿದ್ದಯ್ಯ-ಸಹಾಯಕ ಇಂಜಿನಿಯರ್ ವಾರ್ಡ್ ನಂ-129 ಮತ್ತು 160
 - ಉಮೇಶ್ -ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲಗ್ಗೆರೆ
 - ಅನಿತಾ- ಸೂಪರಿಡೆಂಟ್, ಕ್ಯಾರಿಯರ್ ಆರ್ಆರ್ ನಗರ ವಲಯ
 - ಗೂಳಿಗೌಡ-ಡೆಪ್ಯುಟಿ ಮ್ಯಾನೇರ್ ಆರ್ಆರ್ ನಗರ ವಲಯ
 
