Site icon PowerTV

ಜುಲೈ 1 ರಿಂದ ಅನ್ನಭಾಗ್ಯ ಯೋಜನೆ ಜಾರಿಯಾಗುವುದು ಡೌಟು..?

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ನೀಡಿದ ಐದು ಗ್ಯಾರಂಟಿಗಳಲ್ಲಿ(Congress Guarantee) ಒಂದಾದ ಅನ್ನಭಾಗ್ಯ ಯೋಜನೆ ಜುಲೈ 1 ರಿಂದ ಜಾರಿಯಾಗುವುದು ಡೌಟು.

ಹೌದು, ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ(Siddaramaiah) ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದು, ಅಕ್ಕಿ ಸಂಗ್ರಹ ಇದ್ದರೂ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಹೀಗಾಗಿ ಅನ್ನಭಾಗ್ಯ ಯೋಜನೆಯು ಜುಲೈ 1ರಿಂದ ಜಾರಿಯಾಗುವುದು ಅನುಮಾನ ಎಂದಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಗೆ ನಾಳೆಯಿಂದಲೇ ಅರ್ಜಿ ಸಲ್ಲಿಕೆ ಆರಂಭ

ಜುಲೈ ಒಂದರಿಂದ ಜಾರಿಯಾಗಬೇಕಿದ್ದ ಅನ್ನಭಾಗ್ಯ ಯೋಜನೆಗೆ ಬ್ರೇಕ್ ಬೀಳುತ್ತಾ..?

ಅನ್ನ ಭಾಗ್ಯ ಯೋಜನೆಗೆ ಎಫ್​ಸಿಐ ನಿಂದ ಅಕ್ಕಿ ರವಾನೆ ಮಾಡಿಕೊಳ್ಳಲು ಆಹಾರ ಇಲಾಖೆ ಸಿದ್ದತೆ ನಡೆಸಿತ್ತು. ಏಫ್​ಸಿಐಯ ಮೇಲೆಯೇ ಆಹಾರ ಇಲಾಖೆ ಡಿಪೆಂಡ್ ಆಗಿತ್ತು. ಆದ್ರೀಗಾ ಎಫ್​ಸಿಐನಿಂದ ಅಕ್ಕಿ ಸ್ಥಗಿತ ಮಾಡಿದ್ದು ಜುಲೈ ಒಂದರಿಂದ ಅನ್ನಭಾಗ್ಯ ಯೋಜನೆ ಜಾರಿಯಾಗುತ್ತ ಎನ್ನುವ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದೆ.

 

 

 

Exit mobile version