Site icon PowerTV

ICC Test Rankings : ಅಶ್ವಿನ್ ನಂಬರ್ 1, ಟಾಪ್ 10ನಲ್ಲಿ ಜಡೇಜಾ-ಬುಮ್ರಾ

ಬೆಂಗಳೂರು : ಐಸಿಸಿ (ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ) ನೂತನ ಟೆಸ್ಟ್ ಬೌಲರ್ ಗಳ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಂಬರ್ 1 ಸ್ಥಾನ ಕಾಯ್ದುಕೊಂಡಿದ್ದಾರೆ. ಆಲ್​ರೌಂಡರ್ ಕೋಟಾದಲ್ಲಿ ರವೀಂದ್ರ ಜಡೇಜಾ ಅಗ್ರ ಸ್ಥಾನದಲ್ಲಿದ್ದಾರೆ.

ಅಶ್ವಿನ್ ಅವರ ಜೊತೆಗೆ ಟೀಮ್ ಇಂಡಿಯಾ ಆಲ್​ರೌಂಡರ್ ರವೀಂದ್ರ ಜಡೇಜಾ ಹಾಗೂ ಜಸ್​ಪ್ರೀತ್ ಬುಮ್ರಾ ಕೂಡ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಇಂಗ್ಲೆಂಡ್ ನ ಮೂವರು ಹಾಗೂ ಆಸ್ಟ್ರೇಲಿಯಾದ ಇಬ್ಬರು ಬೌಲರ್​ಗಳು ಟಾಪ್​ 10 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ರವಿಚಂದ್ರನ್ ಅಶ್ವಿನ್ ಅವರಿಗೆ ಇತ್ತೀಚೆಗೆ  ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದರ ಹೊರತಾಗಿಯೂ ಅಶ್ವಿನ್ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : ದಾಖಲೆಗಳ ‘ಚಾಂಪಿಯನ್ ಧೋನಿ’ : ಸಚಿನ್ ದಾಖಲೆಯೂ ಉಡೀಸ್..!

ಟಾಪ್ 10ನಲ್ಲಿರುವ ಬೌಲರ್ ಗಳು

ಟಾಪ್ 10 ಆಲ್ ರೌಂಡರ್ ಗಳು

Exit mobile version