Site icon PowerTV

ಪರ್ಸಂಟೇಜ್ ಡೀಲ್​ಗಾಗಿ ಸಭೆ ಮಾಡಿರಬಹುದೇನೋ, ನನಗೆ ಗೊತ್ತಿಲ್ಲ : ಅಶ್ವತ್ಥನಾರಾಯಣ

ಬೆಂಗಳೂರು : ಸುರ್ಜೇವಾಲಾ ಪರ್ಸಂಟೇಜ್ ಡೀಲ್​​ಗಾಗಿ ಸಭೆ ಮಾಡಿರಬಹುದೇನೋ, ನನಗೆ ಗೊತ್ತಿಲ್ಲ ಎಂದು ಶಾಸಕ ಹಾಗೂ ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಕುಟುಕಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ವರಿಷ್ಠರು ಅಧಿಕಾರಿಗಳ ಸಭೆ ಮಾಡಿರುವುದು ಖಂಡನೀಯ. ನಾವು ರಾಜ್ಯಪಾಲರ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ. ಅವರ ನಿಜವಾದ ಉದ್ದೇಶ ಏನು ಅಂತಾ ಗೊತ್ತಿಲ್ಲ. ಪಕ್ಷದ ಪದಾಧಿಕಾರಿ, ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲು ಅವಕಾಶ ಇಲ್ಲ. ಸಭೆಯಲ್ಲಿ ಸುರ್ಜೇವಾಲ ಭಾಗಿಯಾಗಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಕಾನೂನು ಉಲ್ಲಂಘನೆ ಕಾಂಗ್ರೆಸ್ ಪರಿಪಾಟ

ಕಾನೂನು ಉಲ್ಲಂಘನೆ ಕಾಂಗ್ರೆಸ್ ಪರಿಪಾಟ. ಪರ್ಸಂಟೇಜ್ ಡೀಲ್​ಗಾಗಿ ಸಭೆ ಮಾಡಿರಬಹುದೇನೋ, ನನಗೆ ಗೊತ್ತಿಲ್ಲ. ಸಭೆಯಲ್ಲಿ ಸುರ್ಜೇವಾಲಗೆ ಭಾಗವಹಿಸಲು ಅಧಿಕಾರವಿಲ್ಲ, ಭಾಗವಹಿಸಿರುವುದು ತಪ್ಪು ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.

ಇದನ್ನೂ ಓದಿ : ಪ್ರಿಯಾಂಕ್ ಖರ್ಗೆ ಕೊಟ್ಟಿದ್ದ 6ನೇ ಗ್ಯಾರಂಟಿ ಜಾರಿ

ಅವರದ್ದು ಬಹುಕಾಲದ ಅಪೇಕ್ಷೆ

ಸಿಎಂ ಸ್ಥಾನದ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ ಆಕಾಂಕ್ಷೆ ವಿಚಾರ ಕುರಿತು ಮಾತನಾಡಿ, ಅವರದ್ದು ಬಹುಕಾಲದ ಅಪೇಕ್ಷೆ ಇದೆ. ಅವರ ಪಕ್ಷದಲ್ಲಿ ಯಾರು ಸಿಎಂ ಆಗಬೇಕು ಅಂತಾ ನಿಶ್ಚಯ ಆಗಿದೆ. ಅದರ ಬಗ್ಗೆ ನಾನು ಏನೂ ಹೇಳಲು ಆಗಲ್ಲ, ಅವರಿಗೆ ಶುಭ ಕೋರಬಹುದಷ್ಟೇ ಎಂದು ತಿಳಿಸಿದ್ದಾರೆ.

ಹೊಂದಾಣಿಕೆ ರಾಜಕಾರಣದಿಂದ ಸೋಲು ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಅದರ ಬಗ್ಗೆ ಹೆಚ್ಚು ಏನೂ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

Exit mobile version