Site icon PowerTV

ಹೊಸ ಮನೆಗಳಿಗೂ 200 ಯುನಿಟ್ ವಿದ್ಯುತ್ ಸಿಗಲಿದೆ : ಸಚಿವ ಕೆ.ಜೆ ಜಾರ್ಜ್

ಬೆಂಗಳೂರು : ಹೊಸ ಮನೆಗಳಿಗೂ ಹಂತ ಹಂತವಾಗಿ ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ವಿದ್ಯುತ್ ಸಿಗಲಿದೆ ಎಂದು ಇಂಧನ ಇಲಾಖೆ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹೊಸ ಮನೆ ಮತ್ತು ಮನೆ ಬದಲಾವಣೆ ವಿಚಾರ ಚರ್ಚೆಯಾಗಿದೆ. ಸಿಎಂ‌ ಜೊತೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಯಾರು ಹೊಸದಾಗಿ ಮನೆಗೆ ಬರ್ತಾರೆ ಅವರಿಗೆ ದಾಖಲೆ ಇಲ್ಲ. ಅವರಿಗೆ ಅವರೇಜ್ 53% +10%. ಅಂದರೆ, 53 ಯುನಿಟ್ ವರೆಗೂ ವಿದ್ಯುತ್ ಉಚಿತ ಆಗಲಿದೆ. ಹೊಸ ಮನೆಯವರಿಗೆ ಕೂಡ ಇದೇ ಯೂನಿಟ್ ಅನ್ವಯ ಆಗಲಿದೆ. ಒಂದು ವರ್ಷದವರೆಗೂ ಲೆಕ್ಕ ಸಿಗದವರಿಗೆ ಇದು ಅನ್ವಯ ಆಗಲಿದೆ. ಬಳಿಕ, ಹಂತ ಹಂತವಾಗಿ 200 ಯುನಿಟ್ ಅನ್ವಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಹೊಸ ಮನೆಗಳಿಗೂ, ಶಿಫ್ಟಿಂಗ್ ಆಗುವವರಿಗೂ 200 ಯುನಿಟ್ ಫ್ರೀ ವಿದ್ಯುತ್

ಕೆಇಆರ್​ಸಿ ಕಾಯ್ದೆ ಕೇಂದ್ರದ ಅಧೀನದಲ್ಲಿದೆ

ಬಿಜೆಪಿ ಸರ್ಕಾರದ ವಿದ್ಯುತ್ ದರ ಏರಿಕೆ ಆದೇಶ ಜಾರಿಯಾಗಿದೆ. ಕೆಇಆರ್​ಸಿ ಒಮ್ಮೆ ಆದೇಶ ಮಾಡಿದರೆ ಹಿಂಪಡೆಯಲು ಆಗುವುದಿಲ್ಲ. ಕೆಇಆರ್​ಸಿ ಕಾಯ್ದೆ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ವಿದ್ಯುತ್ ಏರಿಕೆ ವಿಚಾರವನ್ನು ಕೇವಲ ಅಧಿಕಾರಿಗಳು ನಿರ್ಧರಿಸುವುದಿಲ್ಲ ಎಂದು ಸಚಿವ ಕೆ.ಜೆ ಜಾರ್ಜ್​ ತಿಳಿಸಿದ್ದಾರೆ.

ಗ್ರಾಹಕರ ಮೇಲೆ ಹೊರೆ ಹಾಕುವುದಿಲ್ಲ

ನಾವು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಕೆಇಆರ್​ಸಿ ಮೇಲೆ ಹಾಕಲ್ಲ. ಹಿಂದಿನ ಬಿಲ್ ಪಾವತಿಸಲು ಗ್ರಾಹಕರಿಗೆ 3 ತಿಂಗಳ ಕಾಲಾವಕಾಶವಿದೆ. ಗೃಹಜ್ಯೋತಿ ಜಾರಿ ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದಿಲ್ಲ. ಗೃಹಜ್ಯೋತಿ ಯೋಜನೆ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಗೃಹಜ್ಯೋತಿ ಯೋಜನೆ ಅಡಿ ಹೊಸ ಮನೆಗಳಿಗೆ 53 ಯೂನಿಟ್ ಉಚಿತ  ಎಂದು ಹೇಳಿದ್ದಾರೆ.

Exit mobile version