Site icon PowerTV

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಜಾಥಾಗೆ ಸಿಎಂ ಚಾಲನೆ

ಬೆಂಗಳೂರು : ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಜೂ.12 ರಂದು ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಎಂ.ಜಿ ರಸ್ತೆ ಬಳಿಯ ಗಾಂಧಿ ಪ್ರತಿಮೆ ಬಳಿ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಜಾಥಾಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. 

ಹೌದು, ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು ಯಾರಾದ್ರೂ ಬಾಲ ಕಾರ್ಮಿಕರು ಕಂಡರೆ ಕೆಲಸದಿಂದ ಬಿಡಿಸಿ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಜಾತಿ ವ್ಯವಸ್ಥೆ ಪದ್ಧತಿಯಿಂದಾಗಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಗುಲಾಮಗಿರಿ ಮನಸ್ಥಿತಿಯಿಂದ ಹೊರ ಬರಬೇಕು ಎಂದರು.

ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು

ಶಿಕ್ಷಣ ಎಲ್ಲರಿಗೂ ಮುಖ್ಯ ಅದರಿಂದ ಯಾರು ಕೂಡ ವಂಚಿತರಾಗಬಾರದು. 5 ವರ್ಷದಿಂದ 12ನೇ ವರ್ಷದವರೆಗೂ ಪ್ರಾಥಮಿಕ ಶಿಕ್ಷಣ ಎಲ್ಲಾ ಮಕ್ಕಳಿಗೂ ಕಡ್ಡಾಯವ ಎಂದರು.

ಗುಲಾಮಗಿರಿ ಮನಸ್ಥಿತಿಯಿಂದ ಹೊರ ಬರಬೇಕು

ಯಾವ ವ್ಯಕ್ತಿ ಕೂಡ ಗುಲಾಮಗಿರಿ ವ್ಯವಸ್ಥೆಗೆ ಒಳಗಾಗಬಾರದು. ಇಂದಿನ ಜನಾಂಗ ಗುಲಾಮಗಿರಿ ಮನಸ್ಥಿತಿಯಿಂದ ಮೊದಲು ಹೊರಬರಬೇಕು. ಉತ್ತಮ ಸಮಾಜದ ಕಡೆ ನಮ್ಮ ಕೆಲಸ ಮಾದರಿಯಾಗಬೇಕು. ಇದೆಲ್ಲಾ ಆಗಬೇಕು ಅದ್ರೆ ನಮ್ಮಗೆ ಶಿಕ್ಷಣ ಮುಖ್ಯ ಎಂದರು. 

 

 

 

Exit mobile version