Site icon PowerTV

ಉಚಿತ ಪ್ರಯಾಣದಿಂದ ಬಸ್ ಫುಲ್ ರಶ್, ಆಯತಪ್ಪಿ ಬಿದ್ದು ವಿದ್ಯಾರ್ಥಿನಿ ಸಾವು

ಹಾವೇರಿ : ಬಸ್ ನಲ್ಲಿ ಜನ ತುಂಬಿದ್ದಾರೆಂದು ಬಸ್ ಬಾಗಿಲ ಬಳಿ ನಿಂತ ವಿದ್ಯಾರ್ಥಿನಿ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕುಸನೂರು ಗ್ರಾಮದ ಬಳಿ ಘಟನೆ ನಡೆದಿದೆ. ಶಾಲೆಗೆ ತೆರಳುತ್ತಿದ್ದ ಬಾಲಕಿ ಮಧು ಕುಂಬಾರ (14)ಸಾವನ್ನಪ್ಪಿರುವ ವಿದ್ಯಾರ್ಥಿನಿ.

ಬಾಲಕಿ ವಾಸನ ಗ್ರಾಮದಿಂದ ಕುಸನೂರು ಗ್ರಾಮಕ್ಕೆ ಪ್ರೌಢಶಾಲೆಗೆ ತೆರಳುವ ವೇಳೆ ಬಸ್​ ರಶ್​ ಆಗಿತ್ತು. ಜಾಗವಿಲ್ಲದ ಕಾರಣ ಬಾಗಿಲ ಬಳಿಯೇ ನಿಂತಿದ್ದಳು. ಇದರಿಂದಲೇ ಇಂತಹ ಘಟನೆ ಸಂಭವಿಸಿದೆ.

ಇದನ್ನೂ ಓದಿ : ಕಿಲ್ಲರ್ ಕೆಎಸ್ಸಾರ್ಟಿಸಿ : ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವು

ತೀವ್ರ ರಕ್ತಸ್ರಾವದಿಂದ ಬಾಲಕಿ ಸಾವು

ಬಸ್​ ಟರ್ನ್​ ತೆಗೆದುಕೊಳ್ಳುವ ವೇಳೆ ಬಸ್ ಬಾಗಿಲ ಬಳಿ ನಿಂತ ಬಾಲಕಿ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾಳೆ. ಬಲವಾಗಿ ನೆಲಕ್ಕೆ ತಲೆ ಬಿದ್ದ ಹಿನ್ನೆಲೆ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ಶಕ್ತಿ ಯೋಜನೆ ಜಾರಿಯಾದ 2ನೇ ದಿನ ಬಸ್​ಗಳು ಫುಲ್ ರಶ್ ಆಗಿವೆ. ಬಸ್ ಗಳು ಜನರಿಂದ ತುಂಬಿ ತುಳುಕುತ್ತಿರುವುದು ಕಂಡು ಬರುತ್ತಿದೆ.

Exit mobile version