Site icon PowerTV

ಉಡುಪಿ ಜನರು ಬಹಳ ಮೃದು ಹಾಗೂ ಸುಸಂಸ್ಕೃತರು : ಲಕ್ಷ್ಮಿ ಹೆಬ್ಬಾಳ್ಕರ್

ಉಡುಪಿ : ಇಲ್ಲಿನ ಜನರು ಬಹಳ ಮೃದು ಹಾಗೂ ಸುಸಂಸ್ಕೃತರು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಉಡುಪಿಯಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಿಲ್ಲಾ ಉಸ್ತುವಾರಿ ಸಚಿವೆ ಆಗಿ ಉಡುಪಿಯಲ್ಲಿ ಶಕ್ತಿ ಯೋಜನೆ ಉದ್ಘಾಟನೆ ಮಾಡಲು ಸಂತೋಷವಾಗುತ್ತಿದೆ. ಎಲ್ಲರನ್ನು ಜೊತೆಯಾಗಿ ತೆಗೆದುಕೊಂಡು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಶ್ರೀ ಕೃಷ್ಣ ಪರಮಾತ್ಮ ಹಾಗೂ ಉಚ್ಚಿಲ ಮಹಾಲಕ್ಷ್ಮೀ ದೇವಿಯ ಆಶೀರ್ವಾದ ಪಡೆದಿದ್ದೇನೆ. ಬೆಳಗಾವಿ, ಉಡುಪಿ, ಇಡೀ ರಾಜ್ಯ, ನನ್ನ ಕ್ಷೇತ್ರ ಸಂಚಾರ ಮಾಡಬೇಕು. ತಿಂಗಳಿಗೆ ಎರಡು ಬಾರಿ ಉಡುಪಿ ಜಿಲ್ಲೆಗೆ ಬರಬೇಕು ಎಂಬ ಆಸೆ ಇದೆ. ಕನಿಷ್ಠ ಒಂದು ಬಾರಿಯಾದರೂ ಬಂದು ತಾಲೂಕು ಮಟ್ಟದವರೆಗೂ ಹೋಗಿ ತಿರುಗಾಟ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಪಂಚಾಯತ್ ಮಟ್ಟಕ್ಕೂ ಹೋಗಿ ತಿರುಗಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ವಂದಿತಾ ಶರ್ಮಾ ನಮ್ಮ ಸರ್ಕಾರದ ಕಣ್ಣು : ಡಿ.ಕೆ ಶಿವಕುಮಾರ್

ಸವಾಲು ಮೆಟ್ಟಿ ನಿಲ್ಲುವುದೇ ಸ್ಮಾರ್ಟ್ ನೆಸ್

ಉಡುಪಿಯಲ್ಲಿ ಬಿಜೆಪಿ ಐವರು ಶಾಸಕರ ವಿಚಾರ ಕುರಿತು ಮಾತನಾಡಿ, ರಾಜಕಾರಣದಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲುವುದೇ ಸ್ಮಾರ್ಟ್ ನೆಸ್. ವಿರೋಧ ಪಕ್ಷಗಳ ಶಾಸಕರ ಸಹಕಾರವನ್ನು ಕೋರಿದ್ದೇನೆ. ಉಡುಪಿ ಜಿಲ್ಲೆಯನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗಲು ಬಂದಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ಸರ್ಕಾರಕ್ಕೆ ಒಳ್ಳೆಯ ಹೆಸರು ನೀಡಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ಅಭಿವೃದ್ಧಿಯ ಬಗ್ಗೆ ನನ್ನ ಫೋಕಸ್

ನನ್ನ ಮೇಲೆ ಭರವಸೆ ಇಟ್ಟು ಮಹಿಳೆಯನ್ನು ಉಡುಪಿ ಜಿಲ್ಲೆಗೆ ಉಸ್ತುವಾರಿ ಮಾಡಿದ್ದಾರೆ. ಅಭಿವೃದ್ಧಿಯ ಬಗ್ಗೆ ನನ್ನ ಫೋಕಸ್ ಇರುತ್ತದೆ. ಜಿಲ್ಲಾ ಕಾಂಗ್ರೆಸ್ ಸಂಘಟಿಸುವ ಜವಾಬ್ದಾರಿಯೂ ಇದೆ. ಸಂಘಟನೆಯಲ್ಲಿ ಚುರುಕು ಬರುವಂತೆ ಕೆಲಸ ಮಾಡುತ್ತೇನೆ. ರಾಜ್ಯದ ಜನತೆ ಕೊಟ್ಟ ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿ ಇಂದು ಈಡೇರಿದೆ ಎಂದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

Exit mobile version