Site icon PowerTV

ಶಕ್ತಿ ಯೋಜನೆಗೆ ಚಾಲನೆ : ಬೆಂಗಳೂರಿನಲ್ಲಿ 2,000 ಹೋಮ್ ಗಾರ್ಡ್ಸ್ ನಿಯೋಜನೆ

ಬೆಂಗಳೂರು : ಕಾಂಗ್ರೆಸ್ ಸರ್ಕಾರದ 5 ಉಚಿತ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ(ಉಚಿತ ಬಸ್ ಪ್ರಯಾಣ)ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿಸಲಿದ್ದಾರೆ. ಹೀಗಾಗಿ, ಪೊಲೀಸ್ ಇಲಾಖೆ ಕೂಡ ಮುಂಜಾಗ್ರತೆ ಕ್ರಮ ಕೈಗೊಂಡಿದೆ.

ಮೊದಲ ಬಾರಿಗೆ ಮಹಿಳೆಯರಿಗೆ ರಾಜ್ಯಾದ್ಯಂತ ಬಸ್ ಫ್ರೀ ಜೊತೆಗೆ ಒಂದಷ್ಟು ಕಿರಿಕ್ ಗಳು ನಡೆಯೋ ಸಾಧ್ಯತೆ ಕೂಡ ಇದೆ. ಹೀಗಾಗಿ, ಬೆಂಗಳೂರಿನಲ್ಲಿ ಖಾಕಿ ಪಡೆ ಹದ್ದಿನ ಕಣ್ಣು ಇಡಲಿದೆ.

ಬೆಂಗಳೂರಿನದ್ಯಂತ ಸುಮಾರು ಎರಡು ಸಾವಿರ ಹೋಮ್ ಗಾರ್ಡ್‍ಗಳನ್ನು ನಿಯೋಜನೆ ಮಾಡಿದ್ದು, ಪ್ರತಿ ಬಸ್‍ನಲ್ಲಿ ಇಬ್ಬರು ಹೋಮ್ ಗಾರ್ಡ್ಸ್, ಬಸ್ ನಿಲ್ದಾಣಗಳಲ್ಲಿ ಹೆಚ್ಚುವರಿ ಹೋಮ್ ಗಾರ್ಡ್‍ಗಳ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ : ಹೊಸ ಮನೆಗಳಿಗೂ, ಶಿಫ್ಟಿಂಗ್ ಆಗುವವರಿಗೂ 200 ಯುನಿಟ್ ಫ್ರೀ ವಿದ್ಯುತ್

ಪ್ರಯಾಣಿಕರು ಹಾಗೂ ಸಿಬ್ಬಂದಿ ನಡುವೆ ಯಾವುದೇ ಗಲಾಟೆಗಳು, ಗೊಂದಲಗಳು ನಡೆಯಬಾರದು. ಹೀಗಾಗಿ, ಬೆಂಗಳೂರು ಪೊಲೀಸ್ ಕಮಿಷನರ್ ಸಂಬಂಧಪಟ್ಟ ಡಿವಿಜನ್‍ಗಳ ಡಿಸಿಪಿ, ಎಸಿಪಿ, ಇನ್ಸ್ ಪೆಕ್ಟರ್ ಗಳಿಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ.

ಪ್ರತಿ ಡಿವಿಜನ್‍ಗೆ 350 ಹೋಮ್ ಗಾರ್ಡ್‍ಗಳಂತೆ 8 ಡಿವಿಷನ್‍ಗಳಲ್ಲಿ 2 ಸಾವಿರ ಹೋಮ್‍ಗಳನ್ನು ಭದ್ರತೆ ನಿಯೋಜನೆ ಮಾಡಲಾಗಿದೆ. ಪೊಲೀಸರು ಕೂಡ ಸಾಥ್ ನೀಡಲಿದ್ದು, ಬಸ್ ನಿಲ್ದಾಣಗಳು ಮತ್ತು ರಸ್ತೆಗಳಲ್ಲಿ ಹೆಚ್ಚಿನ ಗಸ್ತು ತಿರುಗಲಿದ್ದಾರೆ.

Exit mobile version