Site icon PowerTV

ಬಸ್ ಪ್ರಯಾಣ ಫ್ರೀ.. ಆದ್ರೆ, ಲಗೇಜ್ ಗೆ ದುಡ್ಡು ಕೊಡಬೇಕು : ಬಿಎಂಟಿಸಿ ಎಂ.ಡಿ ಸತ್ಯವತಿ

ಬೆಂಗಳೂರು : ಎಲ್ಲಾ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಇರಲಿದೆ. ಆದರೆ, ಲಗೇಜ್ ಇದ್ದರೆ ದುಡ್ಡು ಕೊಟ್ಟು ಟಿಕೆಟ್ ಪಡೆಯಬೇಕು ಎಂದು ಬಿಎಂಟಿಸಿ ಎಂ.ಡಿ ಸತ್ಯವತಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪವರ್ ಟಿವಿ ಪ್ರತಿನಿಧಿಯೊಂದಿಗೆ ಮಾತನಾಡಿರುವ ಅವರು, ನಾಳೆ ಮಧ್ಯಾಹ್ನ 1 ಗಂಟೆಯಿಂದ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಜೀರೋ ಅಮೌಂಟ್ ಟಿಕೆಟ್ ಕೊಡ್ತೇವೆ. 15 ಕೆ.ಜಿ.ಗಿಂತ ಹೆಚ್ಚು ಲಗೇಜ್ ಇದ್ರೆ ಪ್ರಯಾಣಿಕರು ಹಣ ಪಾವತಿ ಮಾಡಬೇಕು ಎಂದು ತಿಳಿಸಿದ್ದಾರೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ದರವನ್ನು ಸರ್ಕಾರ ಭರಿಸಲಿದೆ. ಹೀಗಾಗಿ, ಮಹಿಳೆಯರಿಗೆ ಬಸ್ ಚಾಲಕರು, ನಿರ್ವಾಹಕರು ಗೌರವ ಕೊಡಬೇಕು ಎಂದು ಕೆಎಸ್ಆರ್ಟಿಸಿ ಎಂ.ಡಿ ಅನ್ಬು ಕುಮಾರ್ ನೌಕರರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ : ನೀರಿನ ಬಿಲ್ ಹೆಚ್ಚಾದರೆ ವಾಪಸ್ ಕಳುಹಿಸಿ : ಶಾಸಕ ಯತ್ನಾಳ್

ಫ್ರೀ ಅಂತಾ ಬಸ್ ನಿಲ್ಲಿಸದಿದ್ರೆ ಕ್ರಮ

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಸಿ, ನಾನ್ ಎಸಿ ಬಿಟ್ಟು ಎಲ್ಲ ಜನರಲ್ ಬಸ್ ಗಳಲ್ಲೂ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಮಹಿಳೆಯರಿಗೆ ಫ್ರೀ ಪ್ರಯಾಣ ಅಂತಾ ಬಸ್ ನಿಲ್ಲಿಸದೇ ಹೋದ್ರೆ ಕ್ರಮ ಕೈಗೊಳ್ಳಲಾಗುವುದು. ಚಾಲಕರು ಹಾಗೂ ಅಧಿಕಾರಿಗಳಿಗೆ ಈಗಾಗಲೇ ಎಚ್ಚರಿಕೆ ಕೊಡಲಾಗಿದೆ ಎಂದು ಹೇಳಿದ್ದಾರೆ.

ಮಹಿಳೆಯರು ಯಾವುದಾದರೂ ಗುರುತಿನ ಚೀಟಿ ತೋರಿಸಿ ಫ್ರೀಯಾಗಿ ಓಡಾಡಬಹುದು. ನಾಳೆ ಶಕ್ತಿ ಯೋಜನೆಗೆ ಸಿಎಂ ಚಾಲನೆ ಕೊಡಲಿದ್ದಾರೆ. ಮಧ್ಯಾಹ್ನ ಒಂದು ಗಂಟೆ ಬಳಿಕ ಮಹಿಳೆಯರು ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣ ಮಾಡಬಹುದು. ಕೆಲವೊಂದು ಕಡೆ ಬಸ್ ಗಳ ಕೊರತೆ ಇರೋದು ನಿಜ. ಅಲ್ಲಿಯೂ ಬಸ್ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Exit mobile version