Site icon PowerTV

DONT DO THAT : ಝೀರೋ ಟ್ರಾಫಿಕ್ ಮಾಡಿದಕ್ಕೆ ಸಿದ್ದರಾಮಯ್ಯ ತರಾಟೆ

ಮೈಸೂರು : ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ ಮೈಸೂರು ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.

ಸಿಎಂ ಆದ ಬಳಿ ಮೊದಲ ಬಾರಿಗೆ ಮೈಸೂರು ಪ್ರವಾಸ ಕೈಗೊಂಡಿದ್ದ ಸಿಎಂ, ಹಲವು ಸಮಾರಂಭಗಳಲ್ಲಿ ಪಾಲ್ಗೊಂಡರು. ಈ ವೇಳೆ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದಕ್ಕೆ ಗರಂ ಆಗಿದ್ದಾರೆ.

ಮೈಸೂರು ವಿಮಾನ ನಿಲ್ದಾಣದಿಂದ ಜಿ.ಪಂ ಕಚೇರಿಗೆ ಬಂದ ಸಿಎಂ ಸಿದ್ದರಾಮಯ್ಯನವರಿಗೆ ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್‌ ಅವರ ಸೂಚನೆಯಂತೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ, ಪೊಲೀಸ್ ಆಯುಕ್ತ ರಮೇಶ್ ಬಾನೋತ್‌ ಗೆ ಸಿಎಂ ತರಾಟೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : ಫಸ್ಟ್ ಬಸ್ ಬಿಡಿ.. ಆಮೇಲೆ ಉಚಿತ, ಖಚಿತ ಎಲ್ಲಾ : ಬಿಜೆಪಿ ವ್ಯಂಗ್ಯ

ಸಿಎಂ ಗುದ್ದಿಗೆ ಅಧಿಕಾರಿಗಳು ಸೈಲೆಂಟ್

ಝೀರೋ ಟ್ರಾಫಿಕ್‌ ಯಾಕೆ ಮಾಡಿದ್ದೀರಿ? ನಿಮಗೆ ಗೊತ್ತಿದೆಯಾ? ನಾನು ಝೀರೋ ಟ್ರಾಫಿಕ್‌ ಬೇಡ ಅಂತಾ ಹೇಳಿದ್ದೆ. DONT DO THAT (ಡೋಂಟ್‌ ಡೂ ದಟ್‌) ಅಂತಾ ರಮೇಶ್ ಬಾನೋತ್‌ ಹಾಗೂ ಡಿಸಿಪಿ ಮುತ್ತುರಾಜ್‌ ಅವರಿಗೆ ತಾಕೀತು ಮಾಡಿದ್ದಾರೆ. ಸಿದ್ದರಾಮಯ್ಯ ರಿಯಾಕ್ಷನ್ ಗೆ ಪೊಲೀಸ್ ಅಧಿಕಾರಿಗಳು ಸೈಲಂಟ್ ಆಗಿದ್ದಾರೆ.

ಜೀರೋ ಟ್ರಾಫಿಕ್ ಬೇಡ ಎಂದಿದ್ದ ಸಿಎಂ

ಸಿಎಂ ಆಗಿ ಪದಗ್ರಹಣ ಮಾಡಿದ ಬಳಿಕ ಸಿದ್ದರಾಮಯ್ಯ ಝೀರೋ ಟ್ರಾಫಿಕ್ ಸೌಲಭ್ಯ ಬೇಡ ಎಂದಿದ್ದರು. ‘ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಝೀರೋ ಟ್ರಾಫಿಕ್ ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಹೇಳಿದ್ದರು.

Exit mobile version