Site icon PowerTV

ನೀರಿನ ಬಿಲ್ ಹೆಚ್ಚಾದರೆ ವಾಪಸ್ ಕಳುಹಿಸಿ : ಶಾಸಕ ಯತ್ನಾಳ್

ಬೆಂಗಳೂರು : ನೀರಿನ ಬಿಲ್ ಹೆಚ್ಚಾದರೆ ಸರ್ಕಾರಕ್ಕೆ ವಾಪಸ್ ಕಳುಹಿಸಿ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಈ  ಕುರಿತು ಟ್ವೀಟ್ ಮಾಡಿರುವ ಅವರು, ಯಾವುದೇ ಷರತ್ತಿನಬಗ್ಗೆ ಹೇಳದೆ ‘ಎಲ್ಲಾ ಉಚಿತ, ಖಚಿತ ಹಾಗು ನಿಶ್ಚಿತ’ ಎಂದು ಘೋಷಣೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ಈಗ ಷರತ್ತುಗಳನ್ನು ವಿಧಿಸಿ ಕರ್ನಾಟಕದ ಮಹಾಜನತೆಗೆ ಮೋಸ ಮಾಡಿದೆ ಎಂದು ಛೇಡಿಸಿದ್ದಾರೆ.

ಇನ್ನೂ ರಾಜ್ಯದ ಜನತೆಗೆ ವಿನಂತಿ ಮಾಡಿರುವ ಶಾಸಕ ಯತ್ನಾಳ್, ಯಾರು ಹೆಚ್ಚಾದ ಕರೆಂಟ್ ಬಿಲ್ ಪಾವತಿ ಮಾಡಬೇಡಿ. 200 ಯೂನಿಟ್ ಒಳಗೆ ಬಳಸುವವರು ಕರೆಂಟ್ ಬಿಲ್ ನೀಡುವವರನ್ನು ವಾಪಸ್ ವಿನಮ್ರತೆಯಿಂದ ಕಳುಹಿಸಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ಇಂಥ 100 ಡಿಕೆಶಿಗಳು ಬಂದ್ರು ಏನು ಮಾಡೋಕಾಗಲ್ಲ : ಶಾಸಕ ಯತ್ನಾಳ್

ಸಿದ್ದರಾಮಯ್ಯರನ್ನು ಕೇಳಿ ಅಂತಾ ಹೇಳಿ

ರಾಜ್ಯದ ಮಹಿಳೆಯರು ಎಲ್ಲ ಬಸ್ಸುಗಳಲ್ಲೂ ಟಿಕೆಟ್ ತೆಗೆದುಕೊಳ್ಳಬೇಡಿ. ಕಂಡೆಕ್ಟರ್ ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕೇಳಿ ಎಂದು ಹೇಳಿ. ನೀರಿನ ಬಿಲ್ ಹೆಚ್ಚಾದರೆ ವಾಪಸ್ ಕಳುಹಿಸಿ. 2000 ರೂ. ಪಡೆಯಲು ಎಲ್ಲ ಮಹಿಳೆಯರು ನೋಂದಾಯಿಸಿ ಎಂದು ಹೇಳಿದ್ದಾರೆ.

ಮಹದೇವಪ್ಪ, ಕಾಕಪಾಟಿಲನಿಗೂ ಕೊಡ್ಬೇಕು

ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ಆಗಬೇಕಿದೆ. ಕೊಟ್ಟ ಮಾತನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಬೇಕು. ಮಹದೇವಪ್ಪನಿಗೂ ಕೊಡಬೇಕು, ಕಾಕಪಾಟಿಲನಿಗೂ ಕೊಡಬೇಕು. ಎಲ್ಲರಿಗೂ ಕೊಡಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.

Exit mobile version