Site icon PowerTV

ನನಗೆ ರಾಜಕಾರಣ ಬೇಕೋ, ಬೇಡ್ವೋ ಅನ್ನಿಸಿಬಿಟ್ಟಿದೆ : ಡಿ.ಕೆ ಸುರೇಶ್

ಬೆಂಗಳೂರು : ನನಗೆ ರಾಜಕಾರಣ ಬೇಕೋ, ಬೇಡ್ವೋ ಅನ್ನಿಸಿಬಿಟ್ಟಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ವೈರಾಗ್ಯದ ಮಾತುಗಳನ್ನಾಡಿದ್ದಾರೆ.

ಕುಣಿಗಲ್ ತಾಲೂಕಿನ ಗಿರಿಗೌಡನ ಪಾಳ್ಯದಲ್ಲಿ ನಡೆದ ಮತದಾರರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸಬೇಕೋ ಬೇಡ್ವೋ ಎಂಬ ಗೊಂದಲ್ಲಿ ಇದ್ದೇನೆ ಎಂದು ಹೇಳಿದ್ದಾರೆ.

ಕೆಲವರು ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ನಿಂತ್ಕೋತೀನೋ ಇಲ್ಲವೋ ಇನ್ನೂ ತೀರ್ಮಾನ ಮಾಡಿಲ್ಲ. ನಾನು ಇನ್ನೂ ಗೊಂದಲದಲ್ಲಿ ಇದ್ದೀನಿ. ಯಾಕಂದ್ರೆ ನನಗೆ ರಾಜಕಾರಣ ಬೇಕೋ ಬೇಡ್ವೊ ಅನ್ನಿಸಿಬಿಟ್ಟಿದೆ ಎಂದು ಡಿ.ಕೆ ಸುರೇಶ್ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ : ನಾನು ಕಿವಿಯಲ್ಲಿ ಕೇಳಿದ್ರೂ, ಕಣ್ಣಲ್ಲಿ ನೋಡಬೇಕು : ಡಿ.ಕೆ ಶಿವಕುಮಾರ್ ಟಕ್ಕರ್

ಮುಂದಿನ ದಿನದಲ್ಲಿ ನಿಮ್ಮ ಸಲಹೆ ಪಡೆದು ಮುಂದುವರಿಯುತ್ತೇನೆ ಎಂದಿದ್ದಾರೆ. ಸಂಸದ ಡಿ.ಕೆ ಸುರೇಶ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಸುರೇಶ್‌ ನನ್ನಮಗನಿದ್ದಂತೆ

ಡಿ.ಕೆ ಸುರೇಶ್ ನನ್ನ ತಮ್ಮನಾದರೂ ನನಗೆ ಮಗ ಇದ್ದಂಗೆ ಅವನು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನನ್ನ ಪೋಷಕರಿಗೆ ನಾನು ಓದಲೇಬೇಕು ಎಂಬ ಆಸೆ ಇತ್ತು, ಆದರೆ, ನಾನು ಓದಲಿಲ್ಲ. ನಾವು ಮೂರು ಜನ ಒಟ್ಟಿಗೆ ಇರಲು ಸಾಧ್ಯವಾಗಲಿಲ್ಲ. ನನ್ನ ಅಂತರಾಳ ಇನ್ನೂ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

Exit mobile version