Site icon PowerTV

APL ತೆರಿಗೆದಾರರಿಗೂ ಮುಂದಿನ ದಿನಗಳಲ್ಲಿ ಗೃಹಲಕ್ಷ್ಮೀ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು : ಮುಂದಿನ ದಿನಗಳಲ್ಲಿ ಎಪಿಎಲ್ ವ್ಯಾಪ್ತಿಯಲ್ಲಿ ಬರುವ ತೆರಿಗೆದಾರರಿಗೂ ಕೂಡ ಗೃಹಲಕ್ಷ್ಮೀ ಯೋಜನೆ ತಲುಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಬೆಂಗಳೂರಿನ ಶಕ್ತಿ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ತೆರಿಗೆದಾರರಿಗೆ ಯೋಜನೆಯ ಲಾಭ ಸಿಗದಿರುವ ವಿಚಾರ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಸಂಬಂಧ ಸಿಎಂ ಜೊತೆ ಸಭೆ ನಡೆಸಲಾಯಿತು. ಎಪಿಎಲ್ ಕಾರ್ಡ್‌ ದಾರರು 11 ಲಕ್ಷ ಜನರು, ಇವರು ತೆರಿಗೆದಾರರು ಇದ್ದಾರೆ. ಸದ್ಯ ಶೇ.85ರಿಂದ 88 ರಷ್ಟು ರಾಜ್ಯದ ಮಹಿಳೆಯರಿಗೆ ಯೋಜನೆ ತಲುಪಲಿದೆ ಎಂದು ಹೇಳಿದ್ದಾರೆ.

ವೋಟರ್ ಐಡಿ, ಪಾಸ್‌ಬುಕ್ ಸಂಖ್ಯೆ ಬೇಡ

ಮಹಿಳೆಯರಿಗೆ ಸರಳ ರೀತಿಯಲ್ಲಿ ಯೋಜನೆ ತಲುಪಬೇಕು ಎಂದು ಸಭೆಯಲ್ಲಿ ಚರ್ಚೆಯಾಗಿದೆ. ಯೋಜನೆಯಲ್ಲಿ ಯಾವುದೇ ಗೊಂದಲವಿಲ್ಲ. ಅರ್ಜಿಯಲ್ಲಿ ನಮೂದಿಸಿರುವ ಕಾಲಂ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ. ವೋಟರ್ ಐಡಿ ಸಂಖ್ಯೆ, ಪಾಸ್‌ಬುಕ್ ಸಂಖ್ಯೆ ಬೇಡ ಎಂದು ಸಿಎಂ ಹೇಳಿದ್ದಾರೆ. ಆನ್‌ಲೈ‌ನ್ ನಲ್ಲಿ ಮತ್ತು ನಾಡ ಕಚೇರಿಯಲ್ಲಿ ಕೂಡ ಅರ್ಜಿ ಸಲ್ಲಿಸಬಹುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಗ್ಯಾರಂಟಿಗಳು ಚೀಪ್ ಪಾಪ್ಯುಲಾರಿಟಿ : ಚಲುವರಾಯಸ್ವಾಮಿ 

ಬಿಪಿಎಲ್ ಕಾರ್ಡ್‌ರಹಿತರಿಗೆ ಯೋಜನೆ ಇಲ್ವಾ?

ಬಿಪಿಎಲ್ ಕಾರ್ಡ್‌ರಹಿತ ಮಹಿಳೆಯರು ಯೋಜನೆ ಪಡೆಯುವ ಆಗಿಲ್ವಾ ?ಎಂಬ ಪ್ರಶ್ನೆಗೆ, ಮುಂದಿನ ದಿನಗಳಲ್ಲಿ ಅವರನ್ನು ಕೂಡ ಪರಿಗಣಿಸುತ್ತೇವೆ. ಕೆಲವರು ಈಗ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಕೆಲವರ ಬಳಿ ಬಿಪಿಎಲ್ ಕಾರ್ಡ್ ಇಲ್ಲ. ಅಧಿಕಾರಿಗಳಿಗೆ ಅರ್ಜಿಯನ್ನು ಸುಖಾಸುಮ್ಮನೆ ತಿರಸ್ಕರಿಸುವಂತಿಲ್ಲ ಅಂತ ಕೂಡ ಸೂಚಿಸಿದ್ದೇವೆ. ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.

ಇದಕ್ಕೆ, ಇನ್ನೊಮ್ಮೆ ಉತ್ತರ ಕೊಡ್ತೀನಿ

ಸರ್ಕಾರಿ ನೌಕರರಿಗೂ ಯೋಜನೆ ಸಿಗಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನೊಮ್ಮೆ ಉತ್ತರ ಕೊಡ್ತೀನಿ. ಯಾರಿಗೆ ಉಪಯೋಗ ಆಗಬೇಕೋ ಅವರಿಗೆ ಯೋಜನೆ ಸಿಗಲಿದೆ. ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಹಣ ಕೊಡ್ತೀವಿ ಅಂತ ಹೇಳಿದ್ರು, ಅವರನ್ನು ಕೇಳಿ ಎಂದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

Exit mobile version