Site icon PowerTV

45 ರೂ. ಬದಲಿಗೆ 202 ರೂ. ಟಿಕೆಟ್ ಹರಿದ ಕಂಡಕ್ಟರ್ : ಪ್ರಯಾಣಿಕರು ಕಕ್ಕಾಬಿಕ್ಕಿ!

ಚಿಕ್ಕಮಗಳೂರು : ಚಿಕ್ಕಮಗಳೂರಿಗೆ ಟಿಕೆಟ್ ಕೇಳಿದ್ರೆ ಮಂಗಳೂರಿಗೆ ಟಿಕೆಟ್ ಕೊಟ್ಟ ಕಂಡಕ್ಟರ್! 45 ರೂ. ಬದಲಿಗೆ 202 ರೂ. ಟಿಕೆಟ್ ಹರಿದ ಭೂಪ. ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರ್ ಮಹಾ ಎಡವಟ್ಟಿಗೆ ಪ್ರಯಾಣಿಕರು ಕಕ್ಕಾಬಿಕ್ಕಿ.

ಚಿಕ್ಕಮಗಳೂರಿನಲ್ಲಿ ಘಟನೆ ನಡೆದಿದೆ. ಕಡೂರು ಡಿಪೋಗೆ ಸೇರಿದ ಬಸ್ ನಲ್ಲಿ ಈ ಎಡವಟ್ಟು ನಡೆದಿದೆ. ಆಂಧ್ರ ಮೂಲದ ಪ್ರವಾಸಿಗರು ಕಡೂರಿನಿಂದ ಚಿಕ್ಕಮಗಳೂರಿಗೆ ಹೊರಟ್ಟಿದ್ದರು.

ಪ್ರಯಾಣಿಕರು ಚಿಕ್ಕಮಗಳೂರಿನ‌ ದತ್ತಪೀಠಕ್ಕೆ ಬಸ್ಸಿನ ಮಾಹಿತಿ ಕೇಳಿದ್ದಾರೆ. ಆಗ ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಬಿಡುವುದಾಗಿ ಕಂಡಕ್ಟರ್ ಬಸ್ ಹತ್ತಿಸಿಕೊಂಡಿದ್ದಾನೆ. ಬಳಿಕ, ಚಿಕ್ಕಮಗಳೂರಿಗೆ ಟಿಕೆಟ್‌ ಕೊಡಿ ಅಂತಾ ಪ್ರಯಾಣಿಕರು ಕೇಳಿದ್ದಾರೆ. ಆಗ ಚಿಕ್ಕಮಗಳೂರು ಬದಲಾಗಿ ಮಂಗಳೂರಿಗೆ ಟಿಕೆಟ್‌ ಕೊಟ್ಟಿದ್ದಾನೆ ಈ ಆಸಾಮಿ.

ಇದನ್ನೂ ಓದಿ : Busಗೆ ಕಾದು ಕಾದು ಸುಸ್ತಾಗಿ, ಎಣ್ಣೆ ಏಟಲ್ಲಿ ಈ ಭೂಪ ಮಾಡಿದ್ದೇನು ಗೊತ್ತಾ?

45 ರೂ. ಬದಲಿಗೆ 202 ರೂ. ಟಿಕೆಟ್

45 ರೂ. ಟಿಕೆಟ್ ಬದಲು 202 ರೂ. ಟಿಕೆಟ್ ನೋಡಿ ಪ್ರಯಾಣಿಕರು ದಂಗಾಗಿದ್ದಾರೆ. ಈ ಬಗ್ಗೆ ಪ್ರಯಾಣಿಕರು ಕಂಡಕ್ಟರ್ ಬಳಿ ಪ್ರಶ್ನಿಸಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರೂ ಕಂಡಕ್ಟರ್‌ ಎಡವಟ್ಟಿಗೆ ಆಕ್ರೋಶ ಹೊರಹಾಕಿದ್ದಾರೆ.

ಬರೋಬ್ಬರಿ 3,636 ರೂ. ಟಿಕೆಟ್

ಒಂದು ಟಿಕೆಟ್‌ಗೆ 202 ರೂ.ನಂತೆ 18 ಪ್ರಯಾಣಿಕರಿಗೆ ಬರೋಬ್ಬರಿ 3,636 ರೂ. ಟಿಕೆಟ್ ನೀಡಿದ್ದಾನೆ. ಆಗ, ಕಡೂರಿನಿಂದ 40 ಕಿ.ಮೀ ಇರುವ ಚಿಕ್ಕಮಗಳೂರಿಗೆ 202 ರೂ. ಟಿಕೆಟ್ ಯಾಕೆ? ಅಂತಾ ಪ್ರಶ್ನೆ ಮಾಡಿದ್ದಾರೆ. ಇದಲ್ಲದೆ, ಚಿಕ್ಕಮಗಳೂರಲ್ಲಿ ಇಳಿಯುತ್ತಿದ್ದಂತೆ ಪ್ರಯಾಣಿಕರ ಬಳಿ ಟಿಕೆಟ್ ವಾಪಸ್ ಕೊಡವಂತೆ ಕೇಳಿದ್ದಾರೆ. ಇದರಿಂದ ಪ್ರಯಾಣಿಕರು ಕಂಡಕ್ಟರ್ ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

Exit mobile version