Site icon PowerTV

ವಿವಾದಿತ ಪಠ್ಯಕ್ಕೆ ಕೊಕ್, ಸಂಪೂರ್ಣ ಪರಿಷ್ಕರಣೆ ಇಲ್ಲ : ಸಿದ್ದರಾಮಯ್ಯ ಸೂಚನೆ

ಬೆಂಗಳೂರು : ವಿವಾದಿತ ಪಠ್ಯಗಳ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಂಪೂರ್ಣ ಪಠ್ಯ ಪರಿಷ್ಕರಣೆ ಇಲ್ಲ ಎಂದು ಶಿಕ್ಷಣ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಮೌಖಿಕ ಸೂಚನೆ ನೀಡಿದ್ದಾರೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಜೊತೆ ಸಿಎಂ ಮಂಗಳವಾರ ಈ ಬಗ್ಗೆ ಕೆಲಕಾಲ ಚರ್ಚೆ ನಡೆಸಿದ್ದಾರೆ. ಹೀಗಾಗಿ, ಕೆಲವು ವಿವಾದಿತ ಪಠ್ಯಗಳನ್ನು ಈ ಸಾಲಿನಲ್ಲಿ ಬೋಧನೆಯಿಂದ ಕೈಬಿಡುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ.

ಈ ಶೈಕ್ಷಣಿಕ ವರ್ಷದಲ್ಲಿ ಕೆಲ ವಿವಾದಿತ ಪಠ್ಯಗಳನ್ನು ಪಟ್ಟಿ ಮಾಡಿ ಸಲ್ಲಿಸಿ. ಸಾಹಿತ್ಯ ಮತ್ತು ಸಾಂಸ್ಕøತಿಕ ವಲಯ ಆಕ್ಷೇಪಿಸಿರುವ ಕೆಲ ಪಠ್ಯಗಳ ಪಟ್ಟಿ ಮಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ. ಹೀಗಾಗಿ ಅಂತಹ ಕೆಲ ಪಠ್ಯಗಳನ್ನು ಮಕ್ಕಳಿಗೆ ಬೋಧನೆ ಮಾಡದಿರಲು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ಶಿಕ್ಷಣ ಇಲಾಖೆಯಿಂದ ವಿವಾದಿತ ಪಠ್ಯಗಳ ಪಟ್ಟಿ ಬಂದ ಬಳಿಕ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಸರ್ಕಾರದ ತೀರ್ಮಾನದ ಬಳಿಕ ವಿವಾದಿತ ಪಠ್ಯಗಳನ್ನು ಬೋಧಿಸದಂತೆ ಶಿಕ್ಷಣ ಇಲಾಖೆಯು ಶಾಲೆಗಳಿಗೆ ಸುತ್ತೋಲೆ ಹೊರಡಿಸಲಿದೆ.

ಇದನ್ನೂ ಓದಿ : ನನಗೆ, ನನ್ನ ಕುಟುಂಬಕ್ಕೆ ‘ಕಾಂಗ್ರೆಸ್ ಫ್ರೀ ಗ್ಯಾರಂಟಿ’ ಬೇಡ : ಎಂ.ಪಿ ರೇಣುಕಾಚಾರ್ಯ

ಒಂದು ವಾರ ಕಾಯಬೇಕು

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಪವರ್ ಟಿವಿಗೆ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪವರ್ ಟಿವಿಗೆ ಪ್ರತಿಕ್ರಿಯಿ ನೀಡಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ಆಗೇ ಆಗುತ್ತದೆ. ಮಕ್ಕಳಿಗೆ ತೊಂದರೆ ‌ಆಗದಂತೆ ಪರಿಷ್ಕರಣೆ ಮಾಡುತ್ತೆವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಸಿಎಂ ಜೊತೆ ಚರ್ಚೆ ಆಗಿದೆ. ಒಂದು ವಾರ ಕಾಯಬೇಕು ಅಷ್ಟೇ. ಮಕ್ಕಳ ಭವಿಷ್ಯಕ್ಕೆ ಒಳ್ಳೆಯದಾಗುವ ದೃಷ್ಟಿಯಲ್ಲಿ ಪರಿಷ್ಕರಣೆ ಆಗುತ್ತೆ. ಪ್ರಣಾಳಿಕೆಯಲ್ಲಿ ಪರಿಷ್ಕರಣೆ ಬಗ್ಗೆ ಹೇಳಿದ್ದೇವೆ. ಜನರು ಅದಕ್ಕಾಗಿ ನಮಗೆ ವೋಟ್ ಹಾಕಿದ್ದಾರೆ. ನಾನು ತುಂಬಾ ಡಿಟೇಲ್ಸ್ ಕೊಡೋದಿಲ್ಲ. ತಜ್ಞರು ಎಲ್ಲವನ್ನು ಮಾಡ್ತಾರೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

Exit mobile version